ಕರ್ನಾಟಕ

karnataka

ETV Bharat / state

ನನಗೆ ಶಕ್ತಿ, ತಾಕತ್ತಿದೆ ಎಂದೆನಿಸಿದರೆ ಪಕ್ಷ ಜವಾಬ್ದಾರಿ ಕೊಡುತ್ತೆ: ಬಿ.ವೈ.ವಿಜಯೇಂದ್ರ - ಪಿಎಸ್​ಐ ಹಗರಣದಲ್ಲಿ ಭಾಗಿಯಾಗಿದ್ದರೆ ಚುನಾವಣೆಗೆ ನಿಲ್ಲಲ್ಲ

ಪಿಎಸ್ಐ ಹಗರಣ ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಬರಲಿದೆ. ಈ ರೀತಿಯ ಕಪೋಲ‌ ಕಲ್ಪಿತ ಆರೋಪಗಳು ಸರಿಯಲ್ಲ. ನಾನು ಅದರಲ್ಲಿ ಇದ್ದೀನಿ ಅಂದ್ರೆ ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದೂ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

party-will-give-me-responsibility-says-karnataka-bjp-vice-president-byvijayendra
ನನಗೆ ಶಕ್ತಿ, ತಾಕತ್ತಿದೆ ಎಂದೆನಿಸಿದರೆ ಪಕ್ಷ ಜವಾಬ್ದಾರಿ ಕೊಡುತ್ತೆ: ಬಿ.ವೈ.ವಿಜಯೇಂದ್ರ

By

Published : Jul 23, 2022, 4:22 PM IST

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ತಮ್ಮ ಮಕ್ಕಳು ಸೇರಿ ಯಾರೇ ಆದರೂ ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕೆಂದು ಆಪೇಕ್ಷೆ ಹೊಂದಿದ್ದಾರೆ. ಹೀಗಾಗಿಯೇ ಶಿಕಾರಿಪುರದಲ್ಲಿ ನನ್ನ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದಾರೆ. ಪಕ್ಷಕ್ಕೂ ಕೂಡ ವಿಜಯೇಂದ್ರಗೆ ಶಕ್ತಿ ಮತ್ತು ತಾಕತ್ತು ಇದೆ ಎಂದು ಅನಿಸಿದರೆ ಜವಾಬ್ದಾರಿ ಕೊಡುತ್ತೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ನಗರದ ಟೌನ್‌ಹಾಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೆಯದಾಗಿ ಕುಟುಂಬ ರಾಜಕಾರಣದ ಬಗ್ಗೆ ನಾನು ಒಪ್ಪಲ್ಲ. ನಮ್ಮ ಪಕ್ಷವೂ ಕೂಡ ಈ ಬಗ್ಗೆ ಒಪ್ಪಲ್ಲ. ಬಿಜೆಪಿಯಲ್ಲಿ ಹಲವು ವರ್ಷದಿಂದ ನಾನೂ ದುಡಿಯುತ್ತಿದ್ದೇನೆ.

ನಿವೃತ್ತಿ ನಂತರವೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ನಾನು ಉಪಾಧ್ಯಕ್ಷ ಆಗಿ ಅವರ ಮಾತಿಗೆ ಬದ್ಧ. ಪಕ್ಷದ ಸೂಚನೆ ಏನಿದೆ ಅದರಂತೆ ನಡೆಯುತ್ತೇನೆ. ನನ್ನ ಬಗ್ಗೆ ನಾನು ಪ್ರಚಾರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ನನಗೆ ಶಕ್ತಿ, ತಾಕತ್ತಿದೆ ಎಂದೆನಿಸಿದರೆ ಪಕ್ಷ ಜವಾಬ್ದಾರಿ ಕೊಡುತ್ತೆ: ಬಿ.ವೈ.ವಿಜಯೇಂದ್ರ

ಪಕ್ಷದ ನಿರ್ಧಾರಕ್ಕೆ ಯಾವಾಗಲೂ ಬದ್ದನಾಗಿದ್ದೇನೆ. ಪಕ್ಷದ ನಿರ್ಧಾರ ಪ್ರಕಾರ ನಡೆದುಕೊಳ್ತೀನಿ. ಮೈಸೂರು ಭಾಗದಲ್ಲಿ ನಿಲ್ಲುವುದೋ, ಶಿಕಾರಿಪುರದಲ್ಲಿ ನಿಲ್ಲುವುದೋ ಅನ್ನೋ ಬಗ್ಗೆ ನಿನ್ನೆಯ ಬೆಳೆವಣಿಗೆಳ ಬಳಿಕ ಅನೇಕ ಚರ್ಚೆಗಳು ಆಗುತ್ತಿವೆ. ವೈಯಕ್ತಿಕ ಹಿತದೃಷ್ಟಿಯಿಂದ ಯಡಿಯೂರಪ್ಪ ಈಗ ನಿರ್ಧಾರ ತೆಗೆದುಕೊಂಡಿದ್ದಾರೆ.

ಹಿಂದೆಯೂ ಅನೇಕ ನಿರ್ಧಾರ ಮಾಡಿದ್ದಾರೆ. ನಾನು ತಂದೆಯವರ ಮಾತು ಪಾಲಿಸಬೇಕಾಗುತ್ತೆ ಮತ್ತು ಪಕ್ಷದ ಏನು ಹೇಳುತ್ತದೆ ಅದನ್ನೂ ನಾನು ಕೇಳಬೇಕಾಗುತ್ತದೆ, ಇದನ್ನೇ ಪಕ್ಷದ ಮುಂದೆಯೂ ಹೇಳಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಮಾಡಬೇಕು ಅಂತ ಹೈಕಮಾಂಡ್ ಬಯಸಿದೆ. ನಾನು ಪಕ್ಷ ಸಂಘಟನೆ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದರು.

ಪಿಎಸ್​ಐ ಹಗರಣದಲ್ಲಿ ಭಾಗಿಯಾಗಿದ್ದರೆ ಚುನಾವಣೆಗೆ ನಿಲ್ಲಲ್ಲ:ಪಿಎಸ್ಐ ನೇಮಕಾತಿ ಹಗರಣದಲ್ಲಿ ವಿಜಯೇಂದ್ರ ಹೆಸರಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಿರಿಯರಿದ್ದಾರೆ. ಪಿಎಸ್ಐ ಹಗರಣ ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಬರಲಿದೆ. ಈ ರೀತಿಯ ಕಪೋಲ‌ ಕಲ್ಪಿತ ಆರೋಪಗಳು ಸರಿಯಲ್ಲ. ನಾನು ಅದರಲ್ಲಿ ಇದ್ದೀನಿ ಎಂದರೆ ಮುಂದಿನ ಚುನಾವಣೆಗೆ ನಿಲ್ಲಲ್ಲ. ಇಂತಹ ಆರೋಪ ಮಾಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸಾಲು ಸಾಲು ಅಕ್ರಮ: ಬೊಮ್ಮಾಯಿ ಸರ್ಕಾರಕ್ಕೆ ಎದುರಾದ ಅಗ್ನಿಪರೀಕ್ಷೆ!

ABOUT THE AUTHOR

...view details