ಬೆಂಗಳೂರು:ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಪೆರೋಲ್ ಪಡೆದು ಪರಾರಿಯಾಗಿದ್ದ ಅಪರಾಧಿ ಒಂದು ದಶಕಕ್ಕೂ ಹೆಚ್ಚು ಕಾಲದ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 2000ನೇ ಇಸವಿಯಲ್ಲಿ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಹಾಗೂ ಡಕಾಯಿತಿ ಪ್ರಕರಣದಲ್ಲಿ ಸುಹೇಲ್ ಎಂಬಾತ ಜೈಲು ಸೇರಿದ್ದ. ಜೈಲಿನಲ್ಲಿ ಚೆೆಸ್ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು, ಆಟದಲ್ಲಿ ಪರಿಣಿತನಾಗಿದ್ದ ಈತನನ್ನು ಜೈಲಾಧಿಕಾರಿಗಳು ಚೆಸ್ ಟೂರ್ನಮೆಂಟ್ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಅನೇಕ ಚೆಸ್ ಟೂರ್ನಿಗಳಲ್ಲಿ ಭಾಗವಹಿಸಿ ಈತ ಜಯಗಳಿಸಿದ್ದ.
ಪೆರೋಲ್ ಪಡೆದು ಪರಾರಿ, 15 ವರ್ಷಗಳ ನಂತರ ಸಿಕ್ಕಿಬಿದ್ದ ಅಪರಾಧಿ!
ಪೆರೋಲ್ ಪಡೆದು ಪರಾರಿಯಾಗಿದ್ದ ಅಪರಾಧಿಯನ್ನು ಪೊಲೀಸರು ಹದಿನೈದು ವರ್ಷಗಳ ನಂತರ ಉಪ್ಪಿನಂಗಡಿಯಲ್ಲಿ ಸೆರೆ ಹಿಡಿದಿದ್ದಾರೆ. ಈತ ಯಾರು? ಪ್ರಕರಣವೇನು? ಇಲ್ಲಿದೆ ವಿವರ.
ಪೆರೋಲ್ ಪಡೆದು ಪರಾರಿ, 15 ವರ್ಷಗಳ ನಂತರ ಸಿಕ್ಕಿಬಿದ್ದ ಅಪರಾಧಿ
ಹೀಗೆ ಜೈಲು ಅಧಿಕಾರಿಗಳ ನಂಬಿಕೆ ಗಳಿಸಿಕೊಂಡಿದ್ದ ಈತ 2007ರಲ್ಲಿ ತಾಯಿಯ ಆರೋಗ್ಯ ಪರಿಸ್ಥಿರಿ ಸರಿಯಿಲ್ಲ ಎಂದು ಪೆರೋಲ್ ಪಡೆದುಕೊಂಡು ಪರಾರಿಯಾಗಿದ್ದ. ಇದೀಗ 15 ವರ್ಷಗಳ ಬಳಿಕ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದ್ದಾನೆ. ಇತ್ತೀಚೆಗೆ ಪೊಲೀಸರು ಉಪ್ಪಿನಂಗಡಿ ಕಡೆ ತೆರಳಿದ್ದಾಗ ಸುಹೇಲ್ ಕಾಣಿಸಿಕೊಂಡಿದ್ದು, ಕೊಡಲೇ ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ:ಪ್ರೇಯಸಿ ಆಸೆ ಪೂರೈಸಲು ಸಹೋದರನ ಮನೆಗೆ ಕನ್ನ ಹಾಕಿದವನ ಬಂಧನ
Last Updated : Dec 27, 2022, 7:01 PM IST