ಕರ್ನಾಟಕ

karnataka

ETV Bharat / state

ಸ್ವಚ್ಛತೆ ಕಡೆ ಒಂದು ನಡೆ... ಬೆಂಗಳೂರಲ್ಲಿ ಕುಂದಾಪುರಿಯನ್ಸ್ ತಂಡದಿಂದ ಪಾರ್ಕ್ ಕ್ಲೀನ್​

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಪ್ರಯುಕ್ತ, ಸ್ವಚ್ಛತೆ ಕಡೆ ಒಂದು ನಡೆ ಎಂಬ ಧ್ಯೇಯದೊಂದಿಗೆ ಕುಂದಾಪುರಿಯನ್ಸ್ ತಂಡ ಪಾರ್ಕ್ ಸ್ವಚ್ಛತೆಗೆ ಮುಂದಾಗಿದ್ದಾರೆ.

ಸ್ವಚ್ಚತೆ ಕಡೆ ಒಂದು ನಡೆ...ಕುಂದಾಪುರಿಯನ್ಸ್ ತಂಡದಿಂದ ಪಾರ್ಕ್ ಸ್ವಚ್ಛತಾ ಕಾರ್ಯ

By

Published : Sep 29, 2019, 6:59 PM IST

ಬೆಂಗಳೂರು:ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ, ನವರಾತ್ರಿ ಮೊದಲ ದಿನವಾದ ಇಂದು ರಾಜರಾಜೇಶ್ವರಿ ನಗರದ ಪಾರ್ಕ್​ನಲ್ಲಿ ಕುಂದಾಪುರಿಯನ್ಸ್ ತಂಡದ 150ಕ್ಕೂ ಹೆಚ್ಚು ಸದಸ್ಯರು ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದರು.

ವಾರ್ಡ್‌ ನಂ.160ರ ದ್ವಾರಕನಗರದ ಪಾರ್ಕ್​ನಲ್ಲಿ ಬೆಳೆದಿದ್ದ ಅನಗತ್ಯ ಹೆಚ್ಚುವರಿ ಗಿಡಗಳನ್ನು ಕತ್ತರಿಸಿ, ಪ್ಲಾಸ್ಟಿಕ್ ಹೆಕ್ಕಿ ತೆಗೆದು ಪಾರ್ಕ್ ಅನ್ನು ಕುಂದಾಪುರದ ಹುಡುಗರು ಸ್ವಚ್ಛಗೊಳಿಸಿದರು. ಈ ಕಾರ್ಯಕ್ರಮಕ್ಕೆ ರಾಜರಾಜೇಶ್ವರಿ ನಗರದ ಕಾರ್ಪೊರೇಟರ್​ ಮಂಜುಳ ಹಾಗೂ ಮಾಜಿ ಕಾರ್ಪೊರೇಟರ್​ ರಾಮಚಂದ್ರಪ್ಪ, ನಟಿ ಅಮೂಲ್ಯ ಅವರ ಪತಿ ಜಗದೀಶ್ ಹಾಗೂ ನಿವೃತ್ತ ಪೊಲೀಸ್​ ಅಧಿಕಾರಿ ಸಂಗ್ರಾಮ್ ಸಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ವಚ್ಛತೆ ಕಡೆ ಒಂದು ನಡೆ... ಕುಂದಾಪುರಿಯನ್ಸ್ ತಂಡದಿಂದ ಪಾರ್ಕ್ ಸ್ವಚ್ಛತಾ ಕಾರ್ಯ

ಅಲ್ಲದೇ, ಕುಂದಾಪುರದ ಹುಡುಗರು ಅಲ್ಲಿಂದ ಬಂದು ಈಗ ಬೆಂಗಳೂರಿನಲ್ಲಿ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರ ಈ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಕೈಜೋಡಿಸಿ ಪಾರ್ಕ್​ಅನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ‌ಜೊತೆಗೆ ಬಿಬಿಎಂಪಿ ಕಡೆಯಿಂದ ಈ ಪಾರ್ಕ್​ನಲ್ಲಿ ಹೂ ಗಿಡಗಳ ಬೆಳೆಸುವುದಕ್ಕೆ ಕ್ರಮ ಕೈಗೊಳ್ಳುವುದಾಗಿ ಕಾರ್ಪೊರೇಟರ್​ ಮಂಜುಳ ಹೇಳಿದ್ರು.

ಕುಂದಾಪುರಿಯನ್ಸ್ ತಂಡದ ಸದಸ್ಯ ದಿನೇಶ್ ಮಾತನಾಡಿ, ಸ್ವಚ್ಛತೆ ಕಡೆ ಒಂದು ನಡೆ ಎಂಬ ಧ್ಯೇಯದೊಂದಿಗೆ ಕುಂದಾಪುರಿಯನ್ಸ್ ತಂಡ ಪಾರ್ಕ್ ಸ್ವಚ್ಛತೆಗೆ ಮುಂದಾಗಿದ್ದೇವೆ. ಕುಂದಾಪುರದಿಂದ ಬಂದು ಇಲ್ಲಿ ನಾವು ಜೀವನ ರೂಪಿಸಿಕೊಂಡಿದ್ದೇವೆ. ಭೂಮಿಗೆ ಏನಾದರು ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ಕೆ ಕೈ ಹಾಕಿದ್ದೇವೆಂದು ತಿಳಿಸಿದರು.

ABOUT THE AUTHOR

...view details