ಬೆಂಗಳೂರು:ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಒಟ್ಟು 84.69 ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಇವರು ಹೊಂದಿದ್ದಾರೆ.
ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದ ಆಸ್ತಿಯ ವಿವರದಲ್ಲಿ ಪುಟ್ಟಣ್ಣ ಹೆಸರಲ್ಲಿ 18.48 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 26.22 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ವಿದ್ಯಾಮಣಿ ಹೆಸರಲ್ಲಿ 2.93 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 1.04 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇರುವ ಬಗ್ಗೆ ಘೋಷಿಸಿದ್ದಾರೆ.
ಪುಟ್ಟಣ್ಣ ಬೇರೆ ಬೇರೆ ವ್ಯಕ್ತಿಗಳಿಗೆ, ಟ್ರಸ್ಟ್‌ಗಳಿಗೆ ಒಟ್ಟು 16.20 ಕೋಟಿ ರೂ. ಸಾಲ ನೀಡಿದ್ದರೆ, ಪತ್ನಿ ವಿದ್ಯಾಮಣಿ ಅವರು 2.29 ಕೋಟಿ ರೂ. ಸಾಲ ನೀಡಿದ್ದಾರೆ. ಈ ಪೈಕಿ ಜಮೀರ್ ಅಹಮದ್ ಖಾನ್‌ಗೆ ಪುಟ್ಟಣ್ಣ 15 ಲಕ್ಷ ರೂ. ಮತ್ತು ವಿದ್ಯಾಮಣಿ ಅವರು 20 ಲಕ್ಷ ರೂ. ಸಾಲ ನೀಡಿದ್ದಾರೆ. ಪುಟ್ಟಣ್ಣ ಅವರ ಹೆಸರಲ್ಲಿ 9.07 ಕೋಟಿ ರೂ. ಸಾಲ ಇದ್ದು, ಇದರಲ್ಲಿ 6 ಕೋಟಿ ರೂ. ಜಮೀರ್ ಅಹಮದ್ ಖಾನ್ ಅವರಿಂದ ಪಡೆದು ಕೊಂಡಿದ್ದಾರೆ. ಪತ್ನಿ ಹೆಸರಲ್ಲಿ 1.81 ಕೋಟಿ ರೂ. ಸಾಲ ಇದೆ.
ಪುಟ್ಟಣ್ಣ ಬಳಿ 26.80 ಲಕ್ಷ ರೂ. ಮೌಲ್ಯದ 550 ಗ್ರಾಂ ಚಿನ್ನ, 2.40 ಲಕ್ಷ ರೂ. ಮೌಲ್ಯದ 4 ಕೆ.ಜಿ. ಬೆಳ್ಳಿ ಮತ್ತು ಪತ್ನಿಯ ಬಳಿ 42.96 ಲಕ್ಷ ರೂ. ಮೌಲ್ಯದ 875 ಗ್ರಾಂ ಚಿನ್ನ, 1.20 ಲಕ್ಷ ರೂ. ಮೌಲ್ಯದ 2 ಕೆ.ಜಿ. ಬೆಳ್ಳಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.