ಬೆಂಗಳೂರು :ಕೊರೊನಾದಿಂದಾಗಿ ಸಿಬಿಎಸ್ಇ 10-12ನೇ ತರಗತಿ ಪರೀಕ್ಷೆ ರದ್ದು ಪಡಿಸಲಾಗಿತ್ತು. ಪರ್ಯಾಯ ಮೌಲ್ಯಮಾಪನ ಪದ್ಧತಿ ಪ್ರಕಾರ ಫಲಿತಾಂಶವನ್ನ ಆಗಸ್ಟ್ 3ರಂದು ಪ್ರಕಟಿಸಲಾಗಿತ್ತು. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕೆಲ ಖಾಸಗಿ ಶಾಲೆಗಳು ಫಲಿತಾಂಶದಲ್ಲಿ ಗೋಲ್ಮಾಲ್ ನಡೆಸಿರು ಆರೋಪ ಕೇಳಿ ಬಂದಿದೆ.
ಖಾಸಗಿ ಶಾಲೆಯಲ್ಲಿ ಸಂಪೂರ್ಣ ಶುಲ್ಕ ಭರಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ನೀಡಿ, ಶುಲ್ಕ ಪಾವತಿ ಬಾಕಿ ಉಳಿಸಿಕೊಂಡ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಸಹಕಾರ ನಗರದ ನಾರಾಯಣ ಓಲಂಪಿಯಾಡ್ ಶಾಲೆ ವಿರುದ್ಧ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಯ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಪೋಷಕರು ಜಮಾಯಿಸಿದ್ದರು.
ಸಿಬಿಎಸ್ಇ 10ನೇ ತರಗತಿ ಫಲಿತಾಂಶದಲ್ಲಿ ಈ ಶಾಲೆಯು ಗೋಲ್ಮಾಲ್ ನಡೆಸಿದೆ. ಪರೀಕ್ಷೆ ರದ್ದಾದ ಕಾರಣ ಮೌಲ್ಯಾಂಕನ, ಪೂರ್ವ ಸಿದ್ಧತಾ ಪರೀಕ್ಷೆ, ಪ್ರಾಯೋಗಿಕ ಅಂಕಗಳ ಮೇಲೆ ಫಲಿತಾಂಶ ಪ್ರಕಟಿಸುವಂತೆ ಬೋರ್ಡ್ ಸೂಚಿಸಿತ್ತು.