ಬೆಂಗಳೂರು:ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ಮಾರ್ಚ್ನಲ್ಲಿ ಆರಂಭವಾಗಲಿದ್ದು, ಪಾಸಾಗಲೆಂದು ವಿದ್ಯಾರ್ಥಿಗಳು, ಪಾಲಕರು ದೇವಾಲಯಗಳಲ್ಲಿ ಪೂಜೆ ಮಾಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಎಕ್ಸಾಂ ಫೀವರ್: ದೇವರ ಮೊರೆ ಹೋದ ವಿದ್ಯಾರ್ಥಿಗಳು - ಬೆಂಗಳೂರು ಲೆಟೆಸ್ಟ್ ನ್ಯೂಸ್
ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳು ಮಾರ್ಚ್ನಲ್ಲಿ ಆರಂಭವಾಗಲಿದ್ದು, ಪಾಸಾಗಲೆಂದು ವಿದ್ಯಾರ್ಥಿಗಳು, ಪಾಲಕರು ದೇವಾಲಯಗಳಲ್ಲಿ ಪೂಜೆ ಮಾಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
Parents made special pooja for children to exam
ನಗರದ ರಾಜರಾಜೇಶ್ವರಿನಗರದ ರಾಘವೇಂದ್ರ ಮಠದಲ್ಲಿ ಪರೀಕ್ಷಾರ್ಥಿಗಳಿಗಾಗಿ ವಿಶೇಷವಾಗಿ ಸರಸ್ವತಿ ಪೂಜೆ ಏರ್ಪಡಿಸಲಾಗಿತ್ತು. ಸುಮಾರು 115ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂಗಡವಾಗಿ ಈ ಪೂಜೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ತಮ್ಮ ಭವಿಷ್ಯದ ದೃಷ್ಟಿಯಿಂದ ಈ ಪರೀಕ್ಷೆಗಳು ಬಹಳ ಮುಖ್ಯ. ಹಾಗಾಗಿ ದೇವರ ಪ್ರಾರ್ಥನೆ,ವಿಶೇಷ ಪೂಜೆ, ಹೋಮಗಳನ್ನು ಆಯೋಜಿಸಲಾಗಿತ್ತು.
ದೇವಸ್ಥಾನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದು, ಇನ್ನು ಈ ಪೂಜೆಗೆ ಪರೀಕ್ಷಾರ್ಥಿಗಳ ಜೊತೆಗೆ ಪೋಷಕರು ಸಾಥ್ ನೀಡಿದರು.