ದೊಡ್ಡಬಳ್ಳಾಪುರ: ಮಹಾಮಾರಿ ಕೊರೊನಾ ತಡೆಗೆ ಪೊಲೀಸರು ಪರೇಡ್ ನಡೆಸಿದ್ದು, ಸಾರ್ವಜನಿಕರು ಹೂಮಳೆ ಸುರಿಸಿ ಪೊಲೀಸರಿಗೆ ಭವ್ಯ ಸ್ವಾಗತ ಕೋರಿದರು.
ಕೊರೊನಾ ಕುರಿತು ಪೊಲೀಸರಿಂದ ಪರೇಡ್ ಮೂಲಕ ಜಾಗೃತಿ... ಜನರಿಂದ ಹೂಮಳೆ, ಬಾಲಕಿಯಿಂದ ಸಲ್ಯೂಟ್! - corona awareness latest news
ಕೊರೊನಾ ತಡೆಯುವಲ್ಲಿ ಪೊಲೀಸರ ಸೇವೆ ಅವಿಸ್ಮರಣೀಯ. ಹಗಲು ರಾತ್ರಿಯೆನ್ನದೆ ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಪೊಲೀಸರು ಪರೇಡ್ ನಡೆಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. ಈ ವೇಳೆ ಸಾರ್ವಜನಿಕರು ಹೂಮಳೆ ಸುರಿಸಿ ಪೊಲೀಸರನ್ನು ಸ್ವಾಗತಿಸಿದರು.
ಪ್ರಪಂಚದಾದ್ಯಂತ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಸೋಂಕು ತಡೆಗೆ ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿದೆ. ಜನರನ್ನ ಮನೆಯಿಂದ ಹೊರ ಬರದಂತೆ ತಡೆಯುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದು, ಸದ್ಯ ದೊಡ್ಡಬಳ್ಳಾಪುರ ಪೊಲೀಸರು ನಗರದ ಪ್ರಮುಖ ಬೀದಿಗಳಲ್ಲಿ ಪರೇಡ್ ನಡೆಸಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು.
ಕೊರೊನಾ ವೈರಸ್ ನಿಯಂತ್ರಣಕ್ಕೆ ಅನಗತ್ಯವಾಗಿ ಓಡಾಡುವುದನ್ನ ನಿಲ್ಲಿಸಿ. ನಿಮ್ಮ ರಕ್ಷಣೆಗಾಗಿಯೇ ನಾವು ಕೆಲಸ ಮಾಡುತ್ತಿದ್ದು, ತುರ್ತು ಅಗತ್ಯ ಸೇವೆಗಾಗಿ ನಮ್ಮ ಸಂಪರ್ಕಿಸಿ ಎಂದು ಪೊಲೀಸರು ಜನರಲ್ಲಿ ಧೈರ್ಯ ತುಂಬಿದರು. ಈ ವೇಳೆ ಜನರು ಹೂಮಳೆ ಸುರಿಸಿ ಪೊಲೀಸರಿಗೆ ಸ್ವಾಗತ ಕೋರಿದರು. ಇನ್ನು ರಸ್ತೆ ಬದಿಯಲ್ಲಿ ಪರೇಡ್ ನೋಡುತ್ತಿದ್ದ ಬಾಲಕಿಯೋರ್ವಳು ಪೊಲೀಸರಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಗೌರವ ಸಲ್ಲಿಸಿದಳು.