ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಕಳೆದ ಒಂದು ತಿಂಗಳ ಅಂತರದಲ್ಲಿ ಮೂರು ಕಟ್ಟಡಗಳು ಧರೆಗುರುಳಿದ್ದು, ಈಗ ಈ ಮನೆ ಭಾರಿ ಮಳೆಯಿಂದ ಹಾನಿಗೊಳಗಾಗಿದ್ದು, ಕುಸಿಯುವ ಆತಂಕ ಭೀತಿ ಶುರುವಾಗಿದೆ.
ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ..! - panic of collapsing home
ಬೆಂಗಳೂರಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇದೀಗ ನಾಗರಭಾವಿಯಲ್ಲಿ ಮನೆಯೊಂದರ ಹಿಂದೆ ಕಾಂಪೌಂಡ್ ಕುಸಿದಿದೆ. ಈಗ ಈ ಮನೆಯೂ ಕುಸಿಯಲಿದೆ ಎಂಬ ಆತಂಕ ಎದುರಾಗಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣ ಎಂಬುವರಿಗೆ ಸೇರಿದ ನಾಗರಭಾವಿಯ ಮನೆಯೊಂದರ ಹಿಂದೆ ಕಾಂಪೌಂಡ್ ಕುಸಿದಿದೆ. ಬೃಹತ್ ನೀರುಗಾಲುವೆಗೆ ಕಟ್ಟಿದ್ದ ಕಾಂಪೌಂಡ್ ಧರೆಗುರುಳಿದೆ. ಈ ಮೂಲಕ ಎರಡಂತಸ್ತಿನ ಕಟ್ಟಡಕ್ಕೆ ಹಾನಿ ಆಗುವ ಆತಂಕ ಎದುರಾಗಿದೆ.
9 ವರ್ಷದ ಹಿಂದೆ ನಿರ್ಮಾಣ ಆಗಿರುವ ಕಟ್ಟಡ ಇದಾಗಿದ್ದು, ಕಳಪೆ ಕಾಮಗಾರಿಯಿಂದ ಕಾಂಪೌಂಡ್ ಕುಸಿದಿದೆ ಎನ್ನಲಾಗ್ತಿದೆ. ಈ ಘಟನೆಯಿಂದ ಮನೆಗೆ ಡ್ಯಾಮೇಜ್ ಆಗಬಹುದು ಎಂದು ಮನೆ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಿರ್ಮಾಣವಾಗಿರುವ ಕಟ್ಟಡವನ್ನ ಕೃಷ್ಣ ಎಂಬುವರು ಖರೀದಿ ಮಾಡಿದ್ದರು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದೆ.