ಕರ್ನಾಟಕ

karnataka

ETV Bharat / state

ಗ್ರಾಮ ಪಂಚಾಯತಿ ಚುನಾವಣೆಯ ಭದ್ರತೆ ಕೋರಿ ಡಿಜಿಪಿಗೆ ಚುನಾವಣಾ ಆಯೋಗ ಪತ್ರ

2020ರ ಅಕ್ಟೋಬರ್ - ನವೆಂಬರ್​​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಈ ಚುನಾವಣೆಗೆ ತಮ್ಮ ಇಲಾಖೆ ಸಹಕಾರ ಅಗತ್ಯವಾಗಿರುತ್ತದೆ. ರಾಜ್ಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥಿತವಾಗಿ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳುವಂತೆ‌ ರಾಜ್ಯ ಚುನವಣಾ ಆಯೋಗ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

elections
ಚುನಾವಣೆ

By

Published : Sep 25, 2020, 3:41 AM IST

ಬೆಂಗಳೂರು:ಅಕ್ಟೋಬರ್-ನವಂಬರ್​​​ನಲ್ಲಿ‌ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಗೆ ಸೂಕ್ತ ಬಂದೋಬಸ್ತ್ ಏರ್ಪಡಿಸುವಂತೆ ರಾಜ್ಯ ಚುನವಣಾ ಆಯೋಗ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ರಾಜ್ಯಾದ್ಯಂತ 5,800 ಗ್ರಾಮ ಪಂಚಾಯತಿಗಳಿಗೆ 2020ರ ಅಕ್ಟೋಬರ್ - ನವೆಂಬರ್​​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಈ ಚುನಾವಣೆಗೆ ತಮ್ಮ ಇಲಾಖೆ ಸಹಕಾರ ಅಗತ್ಯವಾಗಿರುತ್ತದೆ. ರಾಜ್ಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥಿತವಾಗಿ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಪೊಲೀಸ್ ಸಿಬ್ಬಂದಿ ನಿರ್ವಹಣೆ ಬಗ್ಗೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ‌ ಪತ್ರದಲ್ಲಿ ತಿಳಿಸಲಾಗಿದೆ.

ಡಿಜಿಪಿಗೆ ಚುನಾವಣಾ ಆಯೋಗದ ಪತ್ರ

ಪೊಲೀಸ್ ಇಲಾಖೆಯ ವಾಹನ, ಸಿಬ್ಬಂದಿಗೆ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ಇತ್ಯಾದಿಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಕುರಿತು ಪ್ರಸ್ತಾವನೆಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಚುನಾವಣಾ ಆಯೋಗ ರಾಜ್ಯ ಪೊಲೀಸ್ ಮಾಹಾನಿರ್ದೇಶಕರಿಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details