ಬೆಂಗಳೂರು:ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಶ್ರೀ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ನಾಯಕತ್ವದ ಬಗ್ಗೆ ಚರ್ಚೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿ ಸಿಎಂ ಬದಲಾವಣೆ ಮಾಡಿ ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ. ನಮ್ಮವರನ್ನು ಕೂರಿಸುವ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಕೃಪಾ ಅತಿಥಿ ಗೃಹದ ಮುಂದೆ ಮಾಧ್ಯಮಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಠಾಧೀಶರಾಗಿ ನಮಗೆ ಅಧಿಕಾರವಿಲ್ಲ. ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ಸ್ವಾಮೀಜಿಗಳು ಕೇವಲ ಬೆಡ್ ಸಿಕ್ಕಿಲ್ಲ ಅಂತ ಹೋರಾಟ ಮಾಡಬೇಕು. ಸಿಎಂ ಉಳಿಸುವ ಅಥವಾ ಅವರನ್ನು ಬೆಳೆಸುವ ಅಧಿಕಾರ ನಮಗಿಲ್ಲ. ಸಿಎಂ ಬದಲಿಸುವ ವಿಚಾರ ಹೈಕಮಾಂಡ್ ಮಾಡಿದ್ದರೆ ಸಲಹೆ ನೀಡಬಹುದು ಅಷ್ಟೇ. ಬದಲಿಸಿ ಎಂದು ಒತ್ತಡ ಹಾಕುವ ಹಕ್ಕು ನಮಗಿಲ್ಲ ಎಂದರು.
ಲಿಂಗಾಯತ ಸಮಾಜ ಬಹುನಾಯಕತ್ವ ಬೆಂಬಲಿಸಿದೆ. ಸಮಾಜದಲ್ಲಿ ಜಿಲ್ಲೆಗೊಬ್ಬ ನಾಯಕರಿದ್ದಾರೆ. ಅನ್ಯ ಸಮುದಾಯದವರಿಗೆ ಮನವಿ ಮಾಡುತ್ತೇನೆ. ಲಿಂಗಾಯತರಲ್ಲಿ ನಾಯಕರಿಲ್ಲ ಅಂತ ಹೇಳಬಾರದು. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಬೊಮ್ಮಾಯಿ ಸಿಎಂ ಆಗಿದ್ದರು. ನಂತರ ಅನೇಕ ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗೆ ಅಧಿಕಾರ ಸಿಗಲಿಲ್ಲ. ಆದರೆ ಸಿದ್ಧಗಂಗಾ ಶ್ರೀಗಳ ಆಶೀರ್ವಾದದಿಂದ ಯಡಿಯೂರಪ್ಪ ಸಿಎಂ ಹುದ್ದೆಗೆ ಏರಿದರು ಎಂದು ತಿಳಿಸಿದರು.
ಯಡಿಯೂರಪ್ಪರನ್ನು ಒಪ್ಪಿ 4 ಬಾರಿ ಸಿಎಂ ಮಾಡಿದ್ದೆವು. ಈಗ ಲಿಂಗಾಯತರಲ್ಲಿ ನಾಯಕರಿಲ್ಲ ಎಂದು ಬಿಂಬಿಸೋದು ಬೇಡ. ನಮ್ಮ ಉತ್ತರ ಕರ್ನಾಟಕದಲ್ಲಿ ನಾಯಕರು ತುಂಬಿ ತುಳುಕುತ್ತಿದ್ದಾರೆ. ಸಮರ್ಥ ನಾಯಕರನ್ನು ಈಗಲೇ ಹುಟ್ಟುಹಾಕಬೇಕು. ಸಿಎಂ ಬದಲಾವಣೆ ಮಾಡಿದ್ದೇ ಆದಲ್ಲಿ ಉತ್ತರ ಕರ್ನಾಟಕದವರಿಗೆ ನೀಡಬೇಕು. ಅದರಲ್ಲೂ ಲಿಂಗಾಯತರನ್ನೇ ಸಿಎಂ ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಸುದ್ದಿ ಮಾಧ್ಯಮಗಳಲ್ಲಿ ನಿನ್ನೆ ರಾತ್ರಿಯಿಂದ ಹರಿದಾಡಿದ್ದ ಸುದ್ದಿ: