ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಹಿನ್ನೆಲೆ ನಡೆಯುತ್ತಿರುವ ಧರಣಿ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ.
ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಮುಂದುವರೆದಿದೆ. ಧರಣಿಗೆ ಸಾಥ್ ನೀಡಲು ಬೆಳಗಾವಿಯಿಂದ ಬಂದಿರುವ ಕೆಲ ಮುಖಂಡರು ಪ್ರಾರ್ಥನೆ ಮಾಡುವ ಮೂಲಕ ಜಾನಪದ ಗೀತೆಗಳನ್ನು ಹಾಡಿದರು.