ಬೆಂಗಳೂರು: ನಗರದ ಫ್ರೀಡಂ ಪಾರ್ಕ್ನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರೋಪಿ ಅಮೂಲ್ಯಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ 5ನೇ ಎಸಿಎಂಎಂ ಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ಪಾಕ್ ಪರ ಘೋಷಣೆ ಪ್ರಕರಣ: ಅಮೂಲ್ಯಳನ್ನು ವಿಚಾರಣೆಗೆ ಕರೆತರುವಂತೆ ಕೋರ್ಟ್ ಸೂಚನೆ - ಅಮೂಲ್ಯಳನ್ನು ಹಾಜರುಪಡಿಸಲು ಕೋರ್ಟ್ ಸೂಚನೆ
ನಗರದ ಫ್ರೀಡಂ ಪಾರ್ಕ್ನಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಆರೋಪಿ ಅಮೂಲ್ಯಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ 5ನೇ ಎಸಿಎಂಎಂ ಕೋರ್ಟ್ ಎಸ್ಐಟಿ ಪೊಲೀಸರಿಗೆ ಸೂಚಿಸಿದೆ.
ಮಂಗಳವಾರ ಬೆಳಗ್ಗೆ ಪೊಲೀಸ್ ಅಧಿಕಾರಿಗಳು ಜೈಲಿಗೆ ತೆರಳಿ, ಆರೋಪಿ ಅಮೂಲ್ಯಳನ್ನು ಕೋರ್ಟ್ ಗೆ ಕರೆ ತಂದಲ್ಲಿ ಗಲಾಟೆಯಾಗುವ ಸಾಧ್ಯತೆ ಇದ್ದು, ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗಲಿದೆ. ಹೀಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದರಿಂದ ವಿನಾಯಿತಿ ನೀಡಬೇಕು. ಅಗತ್ಯವಿದ್ದಾಗ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು ಎಂದು ಮೌಖಿಕವಾಗಿ ಕೋರಿದರು.
ಪೊಲೀಸ್ ಅಧಿಕಾರಿಗಳ ಮನವಿ ತಿರಸ್ಕರಿಸಿದ ಕೋರ್ಟ್, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಬುಧವಾರ ಆರೋಪಿ ಅಮೂಲ್ಯಳನ್ನು ನ್ಯಾಯಾಲಯಕ್ಕೆ ಕರತರುವಂತೆ ಹೇಳಿದೆ.