ಬೆಂಗಳೂರು:ನಾವು ಸಿನಿಮಾದಲ್ಲಿ ಅಭಿನಯಿಸಿ ಯಾರನ್ನು ಬೇಕಾದರೂ ಮೆಚ್ಚಿಸಬಹುದು, ಆದರೆ ನಮ್ಮ ಮಕ್ಕಳನ್ನು ಮಾತ್ರ ಮೆಚ್ಚಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಪೈಲ್ವಾನ್ ಚಿತ್ರದ ಪ್ರಿ ಈವೆಂಟ್ನಲ್ಲಿ ಕಿಚ್ಚ ಸುದೀಪ್ಗೆ ಚಿತ್ರದ ಲುಕ್ ನೋಡಿ ನಿಮ್ಮ ಮಗಳ ರಿಯಾಕ್ಷನ್ ಹೇಗಿತ್ತು ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕಿಚ್ಚ ಸುದೀಪ್. ನಾವು ಯಾರನ್ನು ಬೇಕಾದರೂ ಮೆಚ್ಚಿಸಬಹುದು ಆದರೆ ನಮ್ಮ ಮಕ್ಕಳನ್ನು ಮಾತ್ರ ಮೆಚ್ಚಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಮನೆಯಲ್ಲಿರುವ ಮಕ್ಕಳು ಮೊದಲು ಬೇರೆಯವರಿಗೆ ಫ್ಯಾನ್ಸ್ ಆಗಿರುತ್ತಾರೆ. ಆನಂತರ ಅವರು ನಮ್ಮ ಅಭಿಮಾನಿಗಳು ಎಂದಿದ್ದಾರೆ.
ಪೈಲ್ವಾನ್ ಪ್ರಿ ರಿಲೀಸ್ ಈವೆಂಟ್ನಲ್ಲಿ ಕಿಚ್ಚ ಸುದೀಪ್ ಮಾತನಾಡಿದರು ನನ್ನ ಮಗಳು ಪೈಲ್ವಾನ್ ಚಿತ್ರದ ಪೋಸ್ಟರ್ ನೋಡಿ, ವಾವ್ ಇದು ಖಂಡಿತವಾಗಲೂ ನೀನೇನಾ ಎಂದು ನನ್ನ ಕೇಳಿದಳು. ಅಲ್ಲದೆ ಪೈಲ್ವಾನ್ ಲುಕ್ಗೆ ಫಿದಾ ಆಗಿದ್ಲು. ಆದರೆ ಅವಳ ರಿಯಾಕ್ಷನ್ ನೋಡಿ ನನಗೆ ಮೊದಲು ನಂಬಲು ಸಾಧ್ಯವಾಗಲಿಲ್ಲ. ಪೈಲ್ವಾನ್ ಚಿತ್ರದ ಕೆಲ ಮೇಕಿಂಗ್ ವಿಡಿಯೋಗಳನ್ನು ತೋರಿಸಿ, ಜೊತೆಗೆ ಮಗಳ ಮುಂದೆ ಜಿಮ್ ಮಾಡಿ ಅದು ನಾನೇ ಎಂದು ಒಪ್ಪಿಸಬೇಕಾಯಿತು ಎಂದು ಹೇಳಿದರು.
ಯಾರಿಂದ ಬೇಕಾದರೂ ಕಾಂಪ್ಲಿಮೆನ್ಸ್ ತೆಗೆದುಕೊಳ್ಳಬಹುದು, ಆದರೆ ನಮ್ಮ ಮಕ್ಕಳಿಂದ ಮಾತ್ರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೇಕಾದರೆ ರವಿಚಂದ್ರನ್ ಅವರನ್ನು ಕೇಳಿ ಎಂದು ಕಿಚ್ಚ ಹೇಳಿದರು. ಪೈಲ್ವಾನ್ ಚಿತ್ರದ ನಿರ್ದೇಶಕ ಕೃಷ್ಣರ ಕೃಪೆಯಿಂದ ನಾವು ಕೂಡ ಜಿಮ್ ಮಾಡಬೇಕಾದ ಪರಿಸ್ಥಿತಿ ಬಂತು ಎಂದು ಕಿಚ್ಚ ಕಿಚಾಯಿಸಿದರು.