ಬೆಂಗಳೂರು: ಚುನಾವಣೆ ನೆಡೆಯುವ ದಿನ ಹೊರಗಿನವರಿಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವೇಶವಿಲ್ಲವೆಂದು ಚುನಾವಣಾ ಆಯೋಗದ ಸ್ಪಷ್ಟ ಅದೇಶವಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರು ಇದನ್ನು ಉಲಂಘಿಸುತ್ತಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮಾಜಿ ಮೇಯರ್ ಪದ್ಮಾವತಿ - Padmavati, a former mayor who violated
ಆರ್.ಆರ್ ನಗರ ವಿಧಾನಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 38 ಹೆಚ್ಎಂಟಿ ವಾರ್ಡ್ ವ್ಯಾಪ್ತಿಯಲ್ಲಿ ಮಾಜಿ ಮೇಯರ್ ಹೆಚ್. ಪದ್ಮಾವತಿ ಅವರು ಬೆಳಗ್ಗಿನಿಂದ ಬೀಡು ಬಿಟ್ಟಿದ್ದು ಕಂಡು ಬಂದಿದೆ.
ಪದ್ಮಾವತಿ
ಆರ್.ಆರ್ ನಗರ ವಿಧಾನಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 38 ಹೆಚ್ಎಂಟಿ ವಾರ್ಡ್ ವ್ಯಾಪ್ತಿಯಲ್ಲಿ ಮಾಜಿ ಮೇಯರ್ ಹೆಚ್. ಪದ್ಮಾವತಿ ಅವರು ಬೆಳಗ್ಗಿನಿಂದ ಬೀಡು ಬಿಟ್ಟಿದ್ದು ಕಂಡು ಬಂದಿದೆ. ಪೀಣ್ಯ ಗ್ರಾಮ ವ್ಯಾಪ್ತಿಯಲ್ಲಿ, ಎಸ್.ಆರ್.ಎಸ್ ಬಳಿಯ ಕಾಂಗ್ರೆಸ್ ಕಛೇರಿಯ ಸುತ್ತ ಮುತ್ತ ಬೂತ್ಗಳ ಬಳಿ ಕಾಣಿಸಿಕೊಂಡಿದ್ದು ಕಾರ್ಯಕರ್ತರೊಂದಿಗೆ ಇರುವಾಗ ಮಾಧ್ಯಮದವರಿಗೂ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಮತದಾರರ ಮೇಲು ಪ್ರಭಾವ ಬಿರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ದಿ ಸಾಮಾಜಿಕ ಜಲತಾಣಗಳಲ್ಲಿಯೂ ವೈರಲ್ ಆಗಿದೆ.