ಬೆಂಗಳೂರು:ಸಿಲಿಕಾನ್ ಸಿಟಿಯ ಪ್ಯಾರಾ ಕ್ರೀಡಾಪಟು ಕೆ.ವೈ. ವೆಂಕಟೇಶ್ ಅವರಿಗೆ ಭಾರತದ ನಾಲ್ಕನೆಯ ಉನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ದೊರಕಿದ್ದು, ಇದು ಪ್ಯಾರಾ ಕ್ರೀಡಾ ಜಗತ್ತಿಗೆ ಉತ್ಸಾಹ ತಂದಿದೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥವಾಗಿರುವ ಕೆ.ವೈ. ವೆಂಕಟೇಶ್ ಕುಬ್ಜರಾಗಿದ್ದರೂ ಕುಗ್ಗದೆ ಪ್ಯಾರಾ ಕ್ರೀಡೆಯಲ್ಲಿ ಮೇರು ಸಾಧನೆ ಮಾಡಿದ್ದಾರೆ. ನಾಲ್ಕು ಅಡಿ ಎತ್ತರವಾಗಿದ್ದು, ವಿಕಲಾಂಗರಾಗಿಯೂ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಪ್ಯಾರಾ ಕ್ರೀಡಾಪಟು ಕೆ.ವೈ.ವೆಂಕಟೇಶ್ ವೆಂಕಟೇಶ್ ಕುಬ್ಜರಾಗಿದ್ದರೂ ಕುಗ್ಗದೆ ಪೋಲಿಯೋ ಪೀಡಿತ ಮಹಿಳೆ ಸಿ.ಎನ್. ಜಾನಕಿ ಎಂಬುವರು 1992 ರಲ್ಲಿ ಇಂಗ್ಲಿಷ್ ಕಾಲುವೆಯನ್ನು ಈಜುವ ಮೂಲಕ ತೋರಿದ ಸಾಧನೆಯಿಂದ ಸ್ಫೂರ್ತಿ ಪಡೆದರು. ನಂತರ 2005 ರ ವಿಶ್ವ ಡ್ವಾರ್ಫ್ ಗೇಮ್ಸ್ನಲ್ಲಿ ಭಾರತದ ಮೊದಲ ಅಥ್ಲೀಟ್ ಸ್ಪರ್ಧಿಯಾಗಿ 6 ಪದಕ (2 ಚಿನ್ನ, 1 ಬೆಳ್ಳಿ, 3 ಕಂಚು) ಹಾಗೂ 2009ರ ಡ್ವಾರ್ಫ್ ಒಲಿಂಪಿಕ್ ಗೇಮ್ಸ್ನಲ್ಲಿ ಭಾರತವನ್ನು ಮುನ್ನಡೆಸಿ ವೈಯುಕ್ತಿಕ 4 ಪದಕ (1 ಚಿನ್ನ, 3 ಬೆಳ್ಳಿ) ಗಳಿಸಿದ ಕೀರ್ತಿ ಕೆ.ವೈ. ವೆಂಕಟೇಶ್ ಅವರದ್ದು.
ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡ ಪ್ಯಾರಾ ಕ್ರೀಡಾಪಟು ಕೆ.ವೈ.ವೆಂಕಟೇಶ್ ಮಲ್ಲೇಶ್ವರದಲ್ಲಿರುವ ಎಂಇಎಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದಿರುವ ವೆಂಕಟೇಶ್, ಅಥ್ಲೆಟಿಕ್ಸ್ ಜೊತೆಗೆ ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್, ಹಾಕಿ, ಫುಟ್ಬಾಲ್ ಹಾಗೂ ವಾಲಿಬಾಲ್ ಕ್ರೀಡೆಗಳಲ್ಲೂ ಸಾಧನೆಗೈದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲೂ ಹೆಸರು ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಏಕಲವ್ಯ, ರಾಜ್ಯೋತ್ಸವ ಮತ್ತು ಇತರೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 2015ರಲ್ಲಿ ನಿವೃತ್ತಿ ಹೊಂದಿದ ವೆಂಕಟೇಶ್ ಪ್ರಸ್ತುತ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ ಸಂಸ್ಥೆಯ ಖಜಾಂಚಿ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಶಿಕಲಾ: ಘೋಷಣೆ ಕೂಗಿ ಅಭಿಮಾನಿಗಳಿಂದ ಸ್ವಾಗತ
ಈ ಕುರಿತಂತೆ ವೆಂಕಟೇಶ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ನಮ್ಮಂಥ ಸಾಮಾನ್ಯರನ್ನು ಸಹ ಗುರುತಿಸುವ ಕಾಲ ಬಂದಿದೆ. ಇಂಥ ಪ್ರಧಾನಿಗಳು ದೊರಕಿರುವುದು ನಮ್ಮ ಭಾಗ್ಯ ಎಂದು ಅಭಿಪ್ರಾಯ ಹಂಚಿಕೊಂಡರು.
ಪ್ಯಾರಾ ಕ್ರೀಡಾಪಟು ಕೆ.ವೈ.ವೆಂಕಟೇಶ್