ಕರ್ನಾಟಕ

karnataka

ETV Bharat / state

ನಿಟ್ಟುಸಿರು ಬಿಟ್ಟ ಖಾಕಿ:  ಕೊರೊನಾ ತಪಾಸಣೆಗೊಳಪಟ್ಟ ಸಿಸಿಬಿ ಪೊಲೀಸರ ವರದಿ ನೆಗೆಟಿವ್​​​ - padarayanapura corona issue

ಪಾದರಾಯನಪುರ ಗಲಾಟೆಯ ಕೊರೊನಾ ಸೋಂಕಿನ ಭಯದಲ್ಲಿ ತಪಾಸಣೆಗೊಳಪಟ್ಟಿದ್ದ ಸುಮಾರು 84 ಜನ ಪೊಲೀಸ್ ಸಿಬ್ಬಂದಿಗೆ ನೆಗೆಟಿವ್ ಬಂದಿದೆ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.

ವರದಿ ನೆಗೆಟಿವ್​​
ವರದಿ ನೆಗೆಟಿವ್​​

By

Published : Apr 27, 2020, 2:39 PM IST

ಬೆಂಗಳೂರು :ಪಾದರಾಯನಪುರ ಕೊರೊನಾ ಸೋಂಕಿತ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರಿಗೂ ಕೊರೊನಾ ಟೆಸ್ಟ್​ಗೆ ಒಳಪಡಿಸಿದ್ದು, ಸದ್ಯ ಪೊಲೀಸರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ಸೋಂಕಿನ ಭಯದಲ್ಲಿ ತಪಾಸಣೆಗೊಳಪಟ್ಟಿದ್ದ ಸುಮಾರು 84 ಜನ ಪೊಲೀಸ್ ಸಿಬ್ಬಂದಿಗಳಿಗೆ ನೆಗೆಟಿವ್ ಬಂದಿದೆ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ. ಪಾದರಾಯನಪುರದ ಶೀಲ್​​ಡೌನ್​ ಏರಿಯಾದ‌ಲ್ಲಿನ ಕೆಲವರನ್ನು ಕ್ವಾರಂಟೈನ್ ಮಾಡಲು ತೆರಳಿದ ಬಿಬಿಎಂಪಿ ಹಾಗೂ ಆರೋಗ್ಯಧಿಕಾರಿಗಳ ಮೇಲೆ ಪಾದರಾಯನಪುರದ ಪುಂಡರು ದಾಳಿ ನಡೆಸಿದ್ದರು. ಹೀಗಾಗಿ ಸುಮಾರು‌ 136ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಹಿಡಿದಾಗ ಅದರಲ್ಲಿ ಐವರು ಆರೋಪಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು.

ಗಲ್ಲಿ ಗಲ್ಲಿಗೆ ತೆರಳಿ ಆರೋಪಿಗಳ ಪತ್ತೆ ಮಾಡಿದ ಪೊಲೀಸರಿಗೆ ಕೊವಿಡ್ 19ಪರಿಕ್ಷೆಗೆ ಒಳಗಾಗುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದರು. ಹೀಗಾಗಿ ಬಹುತೇಕ ಮಂದಿ ಶುಕ್ರವಾರ ಶನಿವಾರ ತಪಾಸಣೆಗೆ ತೆರಳಿದ್ದು, ಸದ್ಯ 84ಜನರ ವರದಿ ನೆಗೆಟಿವ್ ಬಂದಿದೆ. ಇನ್ನುಳಿದ ಪಶ್ಚಿಮ ವಿಭಾಗ, ಉತ್ತರ ವಿಭಾಗ, ಕೇಂದ್ರ ವಿಭಾಗ ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.

ABOUT THE AUTHOR

...view details