ಬೆಂಗಳೂರು: ಪಾದರಾಯನಪುರ ಗಲಾಟೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ನಗರ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ತನಿಖೆಗೆ ಸೂಚನೆ ನೀಡಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು 12 ಇನ್ಸ್ಪೆಕ್ಟರ್ಗಳು 3 ಎಸಿಪಿಗಳಿಂದ ತನಿಖೆ ನಡೆಯಲಿದೆ. ಸದ್ಯ ಬಂಧಿತರ ಮೊಬೈಲ್ ಕರೆಗಳ ಮಾಹಿತಿ , ಘಟನೆ ನಡೆಸುವುದಕ್ಕೆ ಯಾರಾದರೂ ಕುಮ್ಮಕ್ಕು ನೀಡಿದ್ದಾರಾ? ಏಕಾಏಕಿ ಬಿಬಿಎಂಪಿ ಆರೋಗ್ಯ ಇಲಾಖಾಧಿಕಾರಿ, ಪೊಲೀಸರ ಮೇಲೆ ಹಲ್ಲೆ ನಡೆಸಲು ಕಾರಣವೇನು? ಎಂಬ ಮಹತ್ವದ ಮಾಹಿತಿಯನ್ನ ಸಿಸಿಬಿ ಕಲೆಹಾಕಲಿದೆ.
ಪಾದರಾಯನಪುರ ಗಲಭೆ ಪ್ರಕರಣ... ಪ್ರಮುಖ ಆರೋಪಿಗಳ ವಿರುದ್ಧ ಎಫ್ಐಆರ್
ಕೆಲ ಗಂಟೆಗಳ ಹಿಂದೆ ಕೇಸ್ ಟೇಕ್ ಓವರ್ ಮಾಡಿದ ಸಿಸಿಬಿ, ಆರೋಪಿಗಳನ್ನ ತೀವ್ರವಾಗಿ ವಿಚಾರಣೆ ನಡೆಸಿ ಮಾಹಿತಿ ಹಾಕುತ್ತಿದೆ. ಉತ್ತರವಿಭಾಗ, ಪಶ್ವಿಮ ವಿಭಾಗ, ಕೇಂದ್ರ ವಿಭಾಗ ವೈಟ್ ಫೀಲ್ಡ್ ವಿಭಾಗದ ಪೊಲೀಸರು 59 ಆರೋಪಿಗಳ ಹಿನ್ನೆಲೆ ಮಾಹಿತಿಯನ್ನ ಕಲೆ ಹಾಕಿದ್ದು, ಸದ್ಯ ಎಲ್ಲಾ ಮಾಹಿತಿಗಳನ್ನ ಸಿಸಿಬಿಗೆ ನಿಡಲಿದ್ದಾರೆ. ಇನ್ನು ಈ ಸಿಸಿಬಿ ತಂಡ ಬಹಳಷ್ಟು ಪ್ರಕರಣಗಳನ್ನ ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರಣಕ್ಕಾಗಿ ತನಿಖೆ ನಡೆಸಲು ಗೃಹ ಸಚಿವ ಬೊಮ್ಮಯಿ ಸೂಚನೆ ನೀಡಿದ್ದಾರೆ.