ಬೆಂಗಳೂರು:ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಇದುವರೆಗೆ 149 ಜನರ ಬಂಧಿಸಲಾಗಿದ್ದು, ಘಟನೆ ಕುರಿತಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಿನ್ನೆ ಹಿರಿಯ ಅಧಿಕಾರಿಗಳಾದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್, ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್, ವೈಟ್ ಫೀಲ್ಡ್ ವಿಭಾಗ ಅನುಚೇತ್ ಹಾಗೂ ಸಿಸಿಬಿ ತಂಡ ಘಟನೆಗೆ ಪ್ರಮುಖ ಕಾರಣಗಳೇನು ಎಂಬುದರ ಕುರಿತು ಕೆಲ ರೋಚಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಘಟನೆಗೆ ಪ್ರಮುಖ ಕಾರಣ:
ಪಾದರಾಯನಪುರದಲ್ಲಿ ಒಟ್ಟು19 ಕೊರೊನಾ ಪಾಸಿಟಿವ್ ಕೇಸ್ಗಳಿದ್ದು, ಬಿಬಿಎಂಪಿ ಆ ಪ್ರದೇಶವನ್ನ ಸೀಲ್ಡೌನ್ ಮಾಡಿತ್ತು. ಯಾರೂ ಕೂಡ ಮನೆಯಿಂದ ಹೊರಬಾರದ ರೀತಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಆದರೆ, ಕಳೆದೆರಡು ದಿನಗಳ ಹಿಂದೆ ಬಂಧಿತ ಆರೋಪಿಗಳು ಆಕ್ರೋಶಗೊಂಡು ನಮಗೆ ಮೊಟ್ಟೆ, ಮಾಂಸ, ಮೀನು ಅಗತ್ಯ ಸೇವೆ ಒದಗಿಸುವಂತೆ ಆಕ್ರೋಶ ಹೊರ ಹಾಕಿದ್ದರು. ಈ ವೇಳೆ ಕಾರ್ಪೋರೇಟರ್ ಸ್ಥಳಕ್ಕೆ ಆಗಮಿಸಿ ಸಮಾಧಾನ ಪಡಿಸಿದ್ದರು.
ಇದನ್ನೇ ಬಂಡವಾಳವಾಗಿಟ್ಟುಕೊಂಡ ಆರೋಪಿಗಳು, ಸ್ಥಳೀಯ ಜನರನ್ನ ಕೆರಳಿಸಿ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ ವಜೀರ್ , ಇರ್ಫಾನ್ ,ಕಬೀರ್,ಇರ್ಷಾದ್ ಅಹಮದ್ ಕಬೀರ್ ,ಫರ್ಜಿನಾ ಎಂಬುವವರು ತಂಡಕಟ್ಟಿ ಅಧಿಕಾರಿಗಳು ಬಂದರೆ ಗಲಾಟೆ ಮಾಡುವ ಸ್ಕೆಚ್ ಹಾಕಿಕೊಂಡಿದ್ದರು. ಅದರಂಂತೆ ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರನ್ನು ಅಧಿಕಾರಿಗಳು ಕ್ವಾರಂಟೈನ್ಗೆ ಕರೆದುಕೊಂಡು ಹೋಗಲು ಬಂದಾಗ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖ ಆರೋಪಿಗಳ ಹಿನ್ನೆಲೆ :