ಕರ್ನಾಟಕ

karnataka

ETV Bharat / state

ರಮೇಶ್ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಪರಮೇಶ್ವರ್​​​ ಕಾರು ಚಾಲಕನ ವಿಚಾರಣೆ - parameshwar PA suicide case

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಪಿಎ ರಮೇಶ್​ ಆತ್ಮಹತ್ಯೆ ಪ್ರಕರಣ ತನಿಖೆಯು ನಗರದ ಜ್ಞಾನ ಭಾರತಿ ಠಾಣೆ ಇನ್ಸ್​ಪೆಕ್ಟರ್ ಶಿವ ರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿದೆ.

ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ

By

Published : Oct 13, 2019, 1:20 PM IST

ಬೆಂಗಳೂರು:ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿ ರಮೇಶ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜ್ಞಾನ ಭಾರತಿ ಪೊಲೀಸರು ತನಿಖೆ ಆರಂಭಿಸಿದ್ದಾರೆ‌.

ಇನ್ಸ್​ಪೆಕ್ಟರ್ ಶಿವರೆಡ್ಡಿ ನೇತೃತ್ವದಲ್ಲಿ ಪರಮೇಶ್ವರ್ ಅವರ ಕಾರು ಚಾಲಕ ಅನಿಲ್ ಎಂಬುವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅನಿಲ್ ಹಾಗೂ ಮೃತ ರಮೇಶ್ ಉತ್ತಮ ಸ್ನೇಹಿತರಾಗಿದ್ದರು. ಹಾಗೆಯೇ ಇಬ್ಬರೂ ಪರಮೇಶ್ವರ್ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅನಿಲ್ ಅವರಿಂದ ರಮೇಶ್ ಕುರಿತು ಮಾಹಿತಿ ಹಾಗೂ ಸ್ನೇಹಿತರು, ಅಪ್ತವಲಯದಲ್ಲಿ ರಮೇಶ್​ ಹೇಗಿದ್ದರು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ರಮೇಶ್ ಕೊನೆಯ ಬಾರಿಗೆ ಕರೆ ಮಾಡಿದ್ದವರ ವಿವರಕ್ಕಾಗಿ ಸರ್ವೀಸ್ ಪ್ರೊವೈಡರ್​​ಗೆ ಜ್ಞಾನ ಭಾರತಿ ಪೊಲೀಸರು ಪತ್ರ ಬರೆದಿದ್ದಾರೆ. ರಮೇಶ್ ಕೊನೆಯ ಬಾರಿಗೆ ಯಾರೊಂದಿಗೆ ಮಾತನಾಡಿದ್ದರು ಎಂಬ ಬಗ್ಗೆ ವಿವರ ನಾಳೆ ಪೊಲೀಸರ ಕೈಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details