ಕರ್ನಾಟಕ

karnataka

ETV Bharat / state

ಆರು ಕಂಟೈನರ್​​ಗಳಲ್ಲಿ ಬೆಂಗಳೂರು ತಲುಪಿದ 110 ಟನ್ ಆಕ್ಸಿಜನ್​

ಇಲ್ಲಿಯವರೆಗೆ ಕರ್ನಾಟಕ ರಾಜ್ಯವು ರೈಲ್ವೆ ಮೂಲಕ 2116.53 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಪಡೆದಿದೆ.

oxygen train
ಬೆಂಗಳೂರು ತಲುಪಿದ 110 ಟನ್ ಆಕ್ಸಿಜನ್

By

Published : May 30, 2021, 7:25 AM IST

ಬೆಂಗಳೂರು:18ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಶನಿವಾರ ಸಂಜೆ 4:35ಕ್ಕೆ ಬೆಂಗಳೂರು ಒಳನಾಡಿನ ಕಂಟೈನರ್ ಡಿಪೋ ವೈಟ್‌ಫೀಲ್ಡ್ ತಲುಪಿದೆ.

ಶುಕ್ರವಾರ ಬೆಳಿಗ್ಗೆ 10:40ಕ್ಕೆ ಗುಜರಾತ್‌ನ ಜಾಮ್‌ನಗರದಿಂದ 109.84 ಟನ್ ಲೋಡ್ ಆಗಿ ಪ್ರಯಾಣ ಬೆಳೆಸಿ ಶನಿವಾರ (ನಿನ್ನೆ) ಬೆಂಗಳೂರಿನ ವೈಟ್‌ಫೀಲ್ಡ್ ನಿಲ್ದಾಣಕ್ಕೆ ಬಂದಿದೆ. ಈ ರೈಲು 6 ಕ್ರಯೋಜೆನಿಕ್ ಕಂಟೈನರ್‌ಗಳಿಂದ 109.84 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಿದೆ. ನಿನ್ನೆ ಒಂದೇ ದಿನ ಸೂಮಾರು‌ 221.82 ಟನ್ ಪ್ರಾಣವಾಯು ರಾಜ್ಯಕ್ಕೆ ಬಂದಿದೆ.

6 ಕಂಟೈನರ್​​ಗಳಲ್ಲಿ ಬೆಂಗಳೂರು ತಲುಪಿದ 110 ಟನ್ ಆಕ್ಸಿಜನ್

ಭಾರತೀಯ ರೈಲ್ವೆ ಇದುವರೆಗೆ 305 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ನಡೆಸಿದೆ. ಮತ್ತು 1237 ಟ್ಯಾಂಕರ್‌ಗಳಲ್ಲಿ 20,000 ಟನ್‌ಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಪರಿಹಾರವನ್ನು ನೀಡಿದೆ.

ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿ ಕೊಟ್ಟ ನಂತರ ಕರ್ನಾಟಕದಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದೆ. ಈಗ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರೆತೆ ಆಗದಂತೆ ರಾಜ್ಯ ಸರ್ಕಾರ ಕ್ರಮವಹಿಸಿದೆ. ಸದ್ಯ ಬೆಂಗಳೂರಿಗೆ ಆಗಮಿಸಿರುವ ವೈದ್ಯಕೀಯ ಆಮ್ಲಜನಕವನ್ನು ಅಗತ್ಯವಿರುವ ಆಸ್ಪತ್ರೆಗೆ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಮ್ಲಜನಕವನ್ನು ಹಂಚಿಕೆ ಮಾಡಿದೆ.

ಇದನ್ನೂ ಓದಿ:6 ಕಂಟೈನರ್​ಗಳಲ್ಲಿ‌ ಬೆಂಗಳೂರು ತಲುಪಿದ 112 ಟನ್ ಪ್ರಾಣವಾಯು!

ABOUT THE AUTHOR

...view details