ಬೆಂಗಳೂರು: ಆಮ್ಲಜನಕ ಪೂರೈಕೆಗಾಗಿ ರಾಜ್ಯ ಸರ್ಕಾರ ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಬಹರೇನ್ ನಿಂದ 20 ಟನ್ ಸಾಮರ್ಥ್ಯದ ಎರಡು ಕಂಟೈನರ್ ಗಳನ್ನು ಕರ್ನಾಟಕಕ್ಕೆ ಕಳುಹಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇದಲ್ಲದೇ, ಭಾರತೀಯ ತೈಲ ನಿಗಮದ ವತಿಯಿಂದ ಎರಡು ಹೆಚ್ಚುವರಿ ಕಂಟೈನರ್ಗಳನ್ನು ರಾಜ್ಯಕ್ಕೆ ಕಳುಹಿಸುವುದಾಗಿ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಬಹರೇನ್‍ನಿಂದ ಮಂಗಳೂರಿಗೆ ಬಂದಿಳಿದ ಆಮ್ಲಜನಕದ ಕಂಟೈನರ್..! - 20 ಟನ್ ಸಾಮರ್ಥ್ಯದ ಎರಡು ಕಂಟೈನರ್
ಭಾರತೀಯ ತೈಲ ನಿಗಮದ ವತಿಯಿಂದ ಎರಡು ಹೆಚ್ಚುವರಿ ಕಂಟೈನರ್ಗಳನ್ನು ರಾಜ್ಯಕ್ಕೆ ಕಳುಹಿಸುವುದಾಗಿ ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಬಹರೇನ್‍ನಿಂದ ಮಂಗಳೂರಿಗೆ ಬಂದಿಳಿದ ಆಮ್ಲಜನಕದ ಕಂಟೈನರ್..!
ಕರ್ನಾಟಕಕ್ಕೆ ಆಮ್ಲಜನಕವನ್ನು ಪೂರೈಸಲು ಭಾರತೀಯ ವಾಯುಪಡೆಯ ಮೂಲಕ ಐದು ಖಾಲಿ ಟ್ಯಾಂಕರ್ ಗಳನ್ನು ಭುವನೇಶ್ವರ್, ಒಡಿಶಾಕ್ಕೆ ಕಳುಹಿಸಲಾಗಿದೆ. 74 ಮೆಟ್ರಿಕ್ ಟನ್‍ನಷ್ಟು ಆಮ್ಲಜನಕ ತುಂಬಿದ ಕಂಟೈನರ್ಗಳು ಮೇ 7 ಅಥವಾ 8 ರಂದು ಬೆಂಗಳೂರಿಗೆ ತಲುಪಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.