ಕರ್ನಾಟಕ

karnataka

ETV Bharat / state

ಇನ್ನು 2 ಗಂಟೆಗೆ ಸಾಕಾಗುವಷ್ಟು ಮಾತ್ರ ಆಕ್ಸಿಜನ್ ಲಭ್ಯ: ಅರ್ಕಾ ಆಸ್ಪತ್ರೆಗೆ ಶಾಸಕರು, ಬಿಬಿಎಂಪಿ ಅಧಿಕಾರಿಗಳು ದೌಡು - ಆಕ್ಸಿಜನ್ ಕೊರತೆ

ರಾಜ್ಯದ ಬಹುತೇಕ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತಲೆದೋರಿದ್ದು, ಚಾಮರಾಜನಗರದಲ್ಲಿ 24 ಜನ, ಅಫಜಲಪುರದಲ್ಲಿ 4 ಜನ ಮೃತಪಟ್ಟ ಬಳಿಕ, ಇದೀಗ ರಾಜಧಾನಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಕೊರತೆಯ ಆತಂಕ ಎದುರಾಗಿದೆ. ರೋಗಿಗಳ ಜೀವ ಉಳಿಸಲು ಬೇರೆಡೆಗೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Oxygen Shortage in Bengaluru Hospital
ಆತಂಕದಲ್ಲಿ ಅರ್ಕಾ ಆಸ್ಪತ್ರೆ ಸಿಬ್ಬಂದಿ

By

Published : May 4, 2021, 1:21 PM IST

ಬೆಂಗಳೂರು:ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರ್ಕಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಇನ್ನು ಕೇವಲ 2 ಗಂಟೆಗೆ ಸಾಕಾಗುವಷ್ಟು ಆಮ್ಲಜನಕ ಮಾತ್ರ ಲಭ್ಯವಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟು 8 ಆಕ್ಸಿಜನ್ ಸಿಲಿಂಡರ್​ಗಳ ಬೇಡಿಕೆ ಇಟ್ಟಿದ್ದು, ಅದು ಬಂದು ತಲುಪಿಲ್ಲ. ಹೀಗಾಗಿ, ರೋಗಿಗಳನ್ನು ಒತ್ತಾಯಪೂರ್ವಕವಾಗಿ ಹೊರಗೆ ಕಳುಹಿಸುವ ಅನಿವಾರ್ಯತೆ ಎದುರಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂಓದಿ : ಆಕ್ಸಿಜನ್​ ಕೊರತೆ: ಅಫಜಲಪುರ ತಾಲೂಕು ಆಸ್ಪತ್ರೆಯಲ್ಲೂ ನಾಲ್ವರು ರೋಗಿಗಳು ಸಾವು!

ಇತ್ತೀಚಿನ ಮಾಹಿತಿಯಂತೆ ಶಾಸಕ ವಿಶ್ವನಾಥ್, ಬಿಬಿಎಂಪಿ ಅಧಿಕಾರಿಗಳು ಆಸ್ಪತ್ರೆಯಲ್ಲಿ ಬೀಡು ಬಿಟ್ಟಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

ABOUT THE AUTHOR

...view details