ಬೆಂಗಳೂರು: ಆಕ್ಸಿಜನ್ ಅಭಾವ ನೀಗಿಸುವ ನಿಟ್ಟಿನಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿನ ಶಾಸಕರ ಕಚೇರಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳ ಬ್ಯಾಂಕ್‍ನ್ನು ಕಂದಾಯ ಸಚಿವ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಅಶೋಕ್ ಉದ್ಘಾಟಿಸಿದ್ರು.
ಶಾಸಕರ ಕಚೇರಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್ ಉದ್ಘಾಟನೆ - Oxygen Concentrators
ಕಂದಾಯ ಸಚಿವ ಆರ್ ಅಶೋಕ್ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿನ ಶಾಸಕರ ಕಚೇರಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಗಳ ಬ್ಯಾಂಕ್ ಉದ್ಘಾಟನೆ ಮಾಡಿದ್ರು.
ashok
ಕ್ಷೇತ್ರದ ನಿವಾಸಿಗಳಿಗೆ ಅನುಕೂಲವಾಗಲೆಂದು ಕೈಗೊಳ್ಳಲಾದ ಈ ಸೌಲಭ್ಯವು ಅತ್ಯಧಿಕವಾಗಿ ನೆರವಾಗಲಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎನ್. ಲಕ್ಷ್ಮೀಕಾಂತ, ಕಬ್ಬಾಳು ಉಮೇಶ್, ಆಂಜನಪ್ಪ ಮತ್ತು ಪದ್ಮನಾಭನಗರ ಮಂಡಲ ಪ್ರಧಾನ ಕಾರ್ಯದರ್ಶಿ ವಿಜಯ್ ಉಪಸ್ಥಿತರಿದ್ದರು.
ನಂತರದಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ನರ್ಸ್ಗಳು , ಭದ್ರತಾ ಸಿಬ್ಬಂದಿ ವರ್ಗ ಹಾಗೂ ಸ್ವಚ್ಚತಾ ಕೆಲಸ ಮಾಡುವ ವಾರಿಯರ್ಸ್ಗಳಿಗೆ 300 ಕ್ಕೂ ಅಧಿಕ ರೇಷನ್ ಕಿಟ್‍ಗಳನ್ನು ಸಚಿವರು ವಿತರಿಸಿದರು.