ಕರ್ನಾಟಕ

karnataka

By

Published : May 21, 2021, 1:18 PM IST

Updated : May 21, 2021, 2:32 PM IST

ETV Bharat / state

ಕರ್ನಾಟಕಕ್ಕೆ ಆಕ್ಸಿಜನ್ ಹಂಚಿಕೆ ವಿಚಾರದಲ್ಲಿ ವ್ಯತ್ಯಯವಾಗಿದೆ; ಕೇಂದ್ರ ಸಚಿವ ಸದಾನಂದಗೌಡ

ಗ್ರಾಮೀಣ ಭಾಗದಲ್ಲಿ ಕೋವಿಡ್ ನಿರ್ವಹಣೆ ಮಾಡಲು ಆದ್ಯತೆ ಕೊಡಲಾಗಿದೆ. ಸಮುದಾಯ ಭವನ ಮತ್ತು ಶಾಲೆಗಳಲ್ಲಿ ಕೋವಿಡ್ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯಕ್ಕೆ ಆಕ್ಸಿಜನ್ ಹಂಚಿಕೆ ವಿಚಾರದಲ್ಲಿ ವ್ಯತ್ಯಯ ಆಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

Oxygen allocation is a variable for state
ಆಕ್ಸಿಜನ್ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ವ್ಯತ್ಯಯ

ಬೆಂಗಳೂರು: ಆಕ್ಸಿಜನ್ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ವ್ಯತ್ಯಯ ಆಗಿದೆ. ಸಿಎಂ‌ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದರು. ಬೇರೆ ಬೇರೆ ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಕೇಂದ್ರ ಸಚಿವ ಸದಾನಂದಗೌಡ

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಾನಂದಗೌಡ, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ನಾವು ಬಳಕೆ ಮಾಡುವ ಕುರಿತು ನಾಳೆ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಸಭೆ ಇದೆ. ಅಲ್ಲಿ ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗುವ ಸಾಧ್ಯತೆ ಇದೆ ಎಂದರು.

ಗ್ರಾಮೀಣ ಭಾಗದಲ್ಲಿ ಕೋವಿಡ್ ನಿರ್ವಹಣೆ ಮಾಡಲು ಆದ್ಯತೆ ಕೊಡಲಾಗಿದೆ. ಸಮುದಾಯ ಭವನ ಮತ್ತು ಶಾಲೆಗಳಲ್ಲಿ ಕೋವಿಡ್ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಪಿಎಂ‌ ಕೇರ್ಸ್ ನಿಧಿ ಬಳಕೆಗೆ ಕ್ರಮ ಕೈಗೊಳ್ಳಬೇಕು. ರಾಜ್ಯದ ಬೇಡಿಕೆಗೆ ತಕ್ಕಂತೆ ಕೇಂದ್ರವು ರೆಮ್ಡಿಸಿವಿರ್ ನೀಡುತ್ತಿದೆ​ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ರಸಗೊಬ್ಬರ ದರ ಇಳಿಕೆಗೆ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ರಸಗೊಬ್ಬರ ಖರೀದಿಯಲ್ಲಿ ರಾಜ್ಯದ ರೈತರಿಗೆ 750 ಕೋಟಿ ರೂ ಲಾಭ ಆಗಲಿದೆ ಎಂದರು.

ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಬೇಡಿಕೆಯಂತೆ ಔಷಧಗಳನ್ನು ನೀಡುತ್ತಿದೆ. ಏಪ್ರಿಲ್​ನಲ್ಲಿ ರೆಮ್ಡಿಸಿವಿರ್​ಗೆ ಇದ್ದ ಬೇಡಿಕೆ ಧಿಡೀರ್ ಜಾಸ್ತಿ ಆಯ್ತು. ಆಕ್ಸಿಜನ್ ವಿಚಾರದಲ್ಲಿ ಸಾರ್ವಜನಿಕ ವಲಯದ ಸಹಕಾರ ನಮಗೆ ಸಿಕ್ಕಿದೆ. ಕೇಂದ್ರ ಸರ್ಕಾರದ ಕಡೆಯಿಂದ ನಮಗೆ ಸಹಕಾರ ದೊರೆತಿದೆ. ಔಷಧದ ವಿಚಾರದಲ್ಲಿ ಯಾವುದೇ ತೊಂದರೆ ಆಗ್ತಾ ಇಲ್ಲ ಎಂದು ಸಚಿವರು ತಿಳಿಸಿದರು.

ಬ್ಲ್ಯಾಕ್ ಫಂಗಸ್ ರೋಗ ನಮಗೆ ಈಗ ಚಾಲೆಂಜ್ ಆಗಿದೆ. ಇದಕ್ಕೆ ಔಷಧ ನೀಡುವುದು ಸವಾಲಾಗಿದೆ. ಬ್ಲಾಕ್ ಫಂಗಸ್​ಗೆ ಬೇಕಾದ ಔಷಧವನ್ನು ‌ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕಕ್ಕೆ ಯಾವುದೇ ರೀತಿಯಲ್ಲಿ ಔಷಧ ಕೊರತೆ ಆಗಲ್ಲ. ಬ್ಲ್ಯಾಕ್ ಫಂಗಸ್​ಗೆ ರಾಜ್ಯದಿಂದ 20 ಸಾವಿರ ವಯಲ್​ಗೆ ಬೇಡಿಕೆ ನೀಡಿ ಪತ್ರ ಬರೆದಿದ್ದಾರೆ. ಈಗಾಗಲೇ 1050 ವಯಲ್ ಕಳಿಸಲಾಗಿದೆ. ನಾಳೆ ಬರುವ ಔಷಧಿಯಲ್ಲಿ ಕರ್ನಾಟಕಕ್ಕೆ ಹೆಚ್ಚು ನೀಡಲಾಗುವುದು ಎಂದರು.

Last Updated : May 21, 2021, 2:32 PM IST

ABOUT THE AUTHOR

...view details