ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆಗಳು ಇದ್ದು, ಜನರು ತಮ್ಮ ಸ್ವಂತ ಊರಿನತ್ತ ಹೋಗುತ್ತಿದ್ದಾರೆ. ಹೀಗೆ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಹಣ ಲೂಟಿ ಮಾಡುತ್ತಿದ್ದ ಖಾಸಗಿ ಬಸ್ ಮಾಲೀಕರಿಗೆ ಆರ್ಟಿಒ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ದುಪ್ಪಟ್ಟು ದರ ವಿಧಿಸಿರುವ ಟ್ರಾವೆಲ್ಸ್ ಮಾಲೀಕರ ವಿರುದ್ಧ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಖಾಸಗಿ ಬಸ್ಗಳ ಟಿಕೆಟ್ ದರ ವಿಮಾನದ ಟಿಕೆಟ್ ದರಕ್ಕಿಂತಲೂ ಹೆಚ್ಚಾಗಿತ್ತು. ಈ ಮೂಲಕ ಖಾಸಗಿ ಬಸ್ಗಳ ಮಾಲೀಕರು ಹಗಲು ದರೋಡೆಗೆ ಇಳಿದಿದ್ದರು. ಈ ಸಂಬಂಧ ಪ್ರಯಾಣಿಕರಿಂದ ದೂರುಗಳು ಬಂದ ಹಿನ್ನೆಲೆ ಸಾರಿಗೆ ಇಲಾಖೆ 8 ತಂಡಗಳ ಮೂಲಕ ಫೀಲ್ಡ್ಗಿಳಿದು ಕಾರ್ಯಾಚರಣೆ ನಡೆಸಿತ್ತು.