ಕರ್ನಾಟಕ

karnataka

ETV Bharat / state

ಗೌರಿ ಲಂಕೇಶ್​ ಹತ್ಯೆಗೆ ಬಳಸಿದ್ದ ಬೈಕ್​ ಗುರುತಿಸಿದ ಮಾಲೀಕ - etv bharat kannada

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಕೆ ಮಾಡಿದ್ದ ಬೈಕ್​ ಅನ್ನು ಅದರ ಮಾಲೀಕ ಗುರುತಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋಕಾ ವಿಶೇಷ ನ್ಯಾಯಾಲಯಕ್ಕೆ ಬೈಕ್​ ಮಾಲೀಕರು ಹಾಜರಾಗಿದ್ದರು.

owner-of-bike-used-to-kill-gauri-lankesh-identified
ಗೌರಿ ಲಂಕೇಶ್​ ಹತ್ಯೆಗೆ ಬಳಸಿದ್ದ ಬೈಕ್​ ಗುರುತಿಸಿದ ಮಾಲೀಕ

By

Published : Oct 12, 2022, 8:13 PM IST

ಬೆಂಗಳೂರು: 2017ರಲ್ಲಿ ನಗರದ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಕೆ ಮಾಡಿದ್ದ ಬೈಕ್​ ಅನ್ನು ಅದರ ಮಾಲೀಕ ಗುರುತಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋಕಾ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೆ.ಬೀರನಹಳ್ಳಿಯ ಬಿ.ಎಂ. ಗಿರೀಶ್​ ಕಪ್ಪು ಬಣ್ಣದ ಹೀರೋ ಪ್ಯಾಷನ್​ ಪ್ರೋ ಬೈಕ್​ ತನ್ನದೇ ಎಂದು ವಿವರಿಸಿದರು.

ಅಲ್ಲದೇ, ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ದಾವಣಗೆರೆ ಆಸ್ಪತ್ರೆಗೆ ಬರುತ್ತಿದ್ದೆವು. ಈ ನಡುವೆ 2016ರ ಅಕ್ಟೋಬರ್​ 21ರಂದು ದಾವಣಗೆರೆ ನಗರದ ಆಸ್ಪತ್ರೆಯೊಂದರ ಪಾರ್ಕಿಂಗ್​ನಲ್ಲಿ (ಕೆಎ 17, ಇಸಿ-9075) ಮಧ್ಯಾಹ್ನ 1.30ರ ಸಮಯದಲ್ಲಿ ಬೈಕ್​ ನಿಲ್ಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಎಲ್ಲ ಕೆಲಸ ಮುಗಿಸಿ ರಾತ್ರಿ 8.30ಕ್ಕೆ ಹಿಂದಿರುಗಿದಾಗ ಬೈಕ್​ ಇರಲಿಲ್ಲ. ಸುತ್ತಮುತ್ತಲ ಭಾಗಗಳಲ್ಲಿ ಹುಡುಕಿ ಹತ್ತಿರದ ಪೊಲೀಸ್​​​ ಠಾಣೆಗೆ ದೂರು ಸಲ್ಲಿಸಲು ಮುಂದಾದರೂ ಸ್ವೀಕರಿಸಲಿಲ್ಲ. ಬಳಿಕ 2016ರ ಡಿಸೆಂಬರ್​ 4ರಂದು ದಾವಣಗೆರೆ ಪೊಲೀಸರಿಗೆ ದೂರು ದಾಖಲಿಸಿದ್ದೆ ಎಂಬುದಾಗಿ ವಿವರಿಸಿದರು.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆ ಮುಂದೂಡಿತು. ಇದೇ ಬೈಕ್ ಅ​ನ್ನು ಪ್ರಕರಣದ ಆರೋಪಿಗಳಾದ ಗಣೇಶ್​ ಮಿಸ್ಕಿನ್​ ಮತ್ತು ಪರಶುರಾಮ ವಾಗ್ಮೋರೆ ಗೌರಿ ಲಂಕೇಶ್​ ಕೊಲೆ ಬಳಕೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ: ಕೊಲೆ ನೋಡಿದ ಮೊದಲ ಇಬ್ಬರು ಸಾಕ್ಷಿದಾರರು ಕೋರ್ಟ್​​​ಗೆ ಹಾಜರು

ABOUT THE AUTHOR

...view details