ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್. ಹೆಚ್. ಲಕ್ಷ್ಮೀಪತಿ ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಪಿಟಿಸಿಎಲ್ ಮತ್ತು ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳ ನೌಕರರು ನಾಳೆಯಿಂದ ಅನಿರ್ದಿಷ್ಟವಾದ ಮುಷ್ಕರ ಕೈಗೊಳ್ಳಲು ಮುಂದಾಗಿದ್ದಾರೆ. ಇಂಧನ ಸಚಿವರ ಟಿಪ್ಪಣಿ ಹೊರಡಿಸಿದ್ರೂ ಸಹಿತ ನೌಕರರ ಸಂಘ ಮುಷ್ಕರ ಕೈಗೊಳ್ಳುವುದಾಗಿ ಹೇಳಿದೆ.
ಕೆಪಿಟಿಸಿಎಲ್ ಹಾಗೂ ಇತರ ಎಸ್ಕಾಂಗಳ ನೌಕರರ ವೇತನ ಪರಿಷ್ಕರಣೆ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ನೆಡೆಸಿದ ಬಳಿಕ ಇಂಧನ ಸಚಿವ ಸುನಿಲ್ ಕುಮಾರ್, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ವೇತನ ಪರಿಷ್ಕರಣೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಕೆಪಿಟಿಸಿಎಲ್ ಹಾಗೂ ಎಲ್ಲ 5 ಎಸ್ಕಾಂಗಳಲ್ಲಿ ಈಗಿರುವ ವೇತನದ ಮೇಲೆ ಶೇಕಡ 20ರಷ್ಟು ಹೆಚ್ಚಿಸಿ ಪರಿಷ್ಕರಣೆಗೆ ಸೂಚಿಸಲಾಗಿದೆ. ಏಪ್ರಿಲ್ 2022 ರಿಂದ ವೇತನ ಪರಿಷ್ಕರಣೆ ಅನ್ವಯವಾಗಲಿದೆ ಎಂದು ಸುನಿಲ್ ಕುಮಾರ್ ಟಿಪ್ಪಣಿ ಹೊರಡಿಸಿದ್ದಾರೆ.
ಮುಷ್ಕರಕ್ಕೆ ಕೆಪಿಟಿಸಿಎಲ್ ಸಜ್ಜು:ಕೆಪಿಟಿಸಿಎಲ್ ನೌಕರರ ಬೇಡಿಕೆಯಾಗಿ ವೇತನದಲ್ಲಿ 40% ಹೆಚ್ಚಳಮಾಡುವಂತೆ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇಂಧನ ಸಚಿವರ ಅಧ್ಯಕ್ಷತೆಯಲ್ಲಿ 22% ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿತ್ತು. ಅರ್ಥಿಕ ಇಲಾಖೆಯಿಂದ 12 ರಿಂದ 15% ಹೆಚ್ಚಳಕ್ಕೆ ಸಲಹೆ ನೀಡಲಾಗಿತ್ತು. ಆದರೆ ಇಂದು ಸಚಿವ ಸುನಿಲ್ ಕುಮಾರ್ ಸಮಾಧಾನಕ್ಕೆ 20% ಹೆಚ್ಚಳ ಮಾಡಿ ಇಂಧನ ಇಲಾಖೆಗೆ ಟಿಪ್ಪಣಿ ಮುಖಾಂತರ ನಿರ್ದೇಶನ ನೀಡಿದ್ದಾರೆ ಎಂದು ಕವಿಪ್ರನಿ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್. ಹೆಚ್. ಲಕ್ಷ್ಮೀಪತಿ ತಿಳಿಸಿದ್ದಾರೆ.
ಸರ್ಕಾರ ಲಿಖಿತ ರೂಪದಲ್ಲಿ ನೀಡಲಿ:ಇಂಧನ ಮಂತ್ರಿಯಿಂದ ಟಿಪ್ಪಣಿ ಬಂದಿದೆ. ಈ ಟಿಪ್ಪಣಿ ಒಕ್ಕೂಟದ ಅಧ್ಯಕ್ಷ ಆರ್. ಹೆಚ್. ಲಕ್ಷ್ಮೀಪತಿ ಫೈನಲ್ ಮಾಡುವವರಿಗೂ ಮತ್ತು ಸರ್ಕಾರದಿಂದ ಈ ಟಿಪ್ಪಣಿ ಅಧಿಕೃತವಾಗಿ ಬರೋವವರೆಗೂ ಈ ಹೋರಾಟ ನಿರಂತರವಾಗಿರುತ್ತದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.
ವೇತನ ಪರಿಷ್ಕರಣೆಗೆ ಆಗ್ರಹಿಸಿ ನಾಳೆಯಿಂದ ಕವಿಪ್ರನಿ ಮತ್ತು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿಗಳ ಮುಷ್ಕರ:ಮುಷ್ಕರದ ನೋಟಿಸ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಿಗದಿಯಂತೆ ಮಾರ್ಚ್ 16 ರಿಂದ ಸಾಮೂಹಿಕವಾಗಿ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರವನ್ನು ನಡೆಸುತ್ತೇವೆ ಎಂದು ಕವಿಪ್ರನಿ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್. ಹೆಚ್. ಲಕ್ಷ್ಮೀಪತಿ ಈ ಹಿಂದೆ ಹೇಳಿದ್ದರು.
ಸಂಸ್ಥೆಗಳ ಒಕ್ಕೂಟದ ಸಭೆ ನಡೆಸಿದ್ದ ಅವರು, ವೇತನ ಶ್ರೇಣಿಯನ್ನು ಹೆಚ್ಚಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಆಡಳಿತ ಮಂಡಳಿಗೆ 14 ದಿನಗಳ ಮುಷ್ಕರ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಜಾರಿ ಮಾಡಿ ಹತ್ತು ದಿನಗಳು ಕಳೆದರೂ ಇಲ್ಲಿಯವರೆಗೂ ನಮ್ಮ ಮಂಡಳಿಯಿಂದ ನಮ್ಮ ಬೇಡಿಕೆಗಳಿಗೆ ಪೂರಕವಾದ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಒಮ್ಮತದಿಂದ ತೀರ್ಮಾನಿಸಿದ್ದೆವು ಎಂದು ತಿಳಿಸಿದ್ದರು.
ಇದನ್ನೂ ಓದಿ:ಹಳೆ ಪಿಂಚಣಿ ಯೋಜನೆ ಮರುಜಾರಿಗೊಳಿಸಲು ಆಗ್ರಹ: 18 ಲಕ್ಷ ಸರ್ಕಾರಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ..