ದೇವನಹಳ್ಳಿ: ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ ಪ್ರಯಾಣಿಕರು ಬಸ್ ಮತ್ತು ರೈಲು ಪ್ರಯಾಣ ಬಿಟ್ಟು ವಿಮಾನಯಾನದತ್ತ ಒಲವು ತೋರಿಸುತ್ತಿದ್ದಾರೆ. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಜಾನೆಯೇ ಥೇಟ್ ಮೆಜೆಸ್ಟಿಕ್ನಂತೆ ಪ್ರಯಾಣಿಕರು ತುಂಬಿ ತುಳುಕುತ್ತಿರುವ ದೃಶ್ಯ ಕಂಡು ಬಂದಿದೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳು ಬೆಂಗಳೂರು ಮಂಜಿನಲ್ಲಿ ಮುಳುಗಿ ಹೋಗುತ್ತಿತ್ತು. ಆದರೆ ಈ ಬಾರಿಯ ಡಿಸೆಂಬರ್ ತಿಂಗಳು ಮಂಜು ಜೊತೆ ಮಳೆಯು ಸೇರಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಮಲೆನಾಡಿನಂತೆ ಭಾಸವಾಗುತ್ತಿದೆ.