ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 600 ಮಂದಿಗೆ ಕೋವಿಡ್ ದೃಢ: 3 ಸೋಂಕಿತರು ಬಲಿ - Corona News 2020

ರಾಜ್ಯದಲ್ಲಿ ಇಂದು 3 ಮಂದಿ ಕೋವಿಡ್​​ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,110ಕ್ಕೆ ಏರಿಕೆ ಆಗಿದೆ.

over-600-cases-of-kovid-infection-in-the-state
ಕೋವಿಡ್

By

Published : Jan 4, 2021, 9:50 PM IST

ಬೆಂಗಳೂರು: ರಾಜ್ಯದಲ್ಲಿ 600 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 9,22,538ಕ್ಕೆ ಏರಿಕೆ ಆಗಿದೆ.

3 ಮಂದಿ ಕೋವಿಡ್​ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,110ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1283 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 9,00,202 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ತೀವ್ರ ನಿಗಾ ಘಟಕದಲ್ಲಿ 196 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 10,207 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಕಳೆದ 7 ದಿನಗಳಲ್ಲಿ 23,130 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 61,753, ದ್ವಿತೀಯ ಸಂಪರ್ಕದಲ್ಲಿ 71,031 ಜನರು ಇದ್ದಾರೆ.‌

ಓದಿ:ಪರಿಷತ್ ಗಲಾಟೆ ಬಗ್ಗೆ ಆತ್ಮಾವಲೋಕನ ಮಾಡಲು ಸಮಾಲೋಚನಾ ಸಭೆ ನಡೆಸುತ್ತೇನೆ: ಸ್ಪೀಕರ್ ಕಾಗೇರಿ

ಇನ್ನು ಯುಕೆಯಿಂದ ಇಂದು ಯಾವುದೇ ಪ್ರಯಾಣಿಕರು ಬಂದಿಲ್ಲ. ಈವರೆಗೆ 2176 ಪರೀಕ್ಷೆ ನಡೆಸಿದ್ದು, 37 ಪಾಸಿಟಿವ್ ಕೇಸ್ ದೃಢವಾಗಿದೆ. 2101 ಮಂದಿಗೆ ನೆಗೆಟಿವ್ ಬಂದಿದ್ದು, 38 ವರದಿ ಬರಬೇಕಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 120 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿದ್ದು, 17 ಮಂದಿಗೆ ಕೋವಿಡ್ ದೃಢಪಟ್ಟಿದೆ. 103 ಜನರ‌ ವರದಿ ನೆಗೆಟಿವ್ ಬಂದಿದೆ.

ABOUT THE AUTHOR

...view details