ಬೆಂಗಳೂರು: ಅಡಿಕೆಯನ್ನು ಡ್ರಗ್ಸ್ ಮತ್ತು ನಾರ್ಕೋ ಪಟ್ಟಿಯಲ್ಲಿ ಸೇರಿಸಿರುವುದರಿಂದ ಬೆಲೆ ಕುಸಿದಿದೆ ಎಂದು ಆಡಳಿತ ಪಕ್ಷದ ಶಾಸಕರೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆದಿದೆ.
ಡ್ರಗ್ಸ್ ಪಟ್ಟಿಯಲ್ಲಿ ಅಡಿಕೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆಡಳಿತ ಪಕ್ಷದ ಶಾಸಕರು - Methodology session
ಶಾಸಕ ಆರಗ ಜ್ಞಾನೇಂದ್ರ, 2 ಸಾವಿರ ರೂ.ನಷ್ಟು ಅಡಿಕೆ ಬೆಲೆ ಕುಸಿದಿದೆ. ಕೂಡಲೇ ಡ್ರಗ್ಸ್ ಪಟ್ಟಿಯಿಂದ ಅಡಿಕೆಯನ್ನು ಕೈಬಿಡಿ ಎಂದು ಒತ್ತಾಯಿಸಿದರು. ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ಯು.ಟಿ.ಖಾದರ್ ಸಹ ಇದಕ್ಕೆ ಧ್ವನಿಗೂಡಿಸಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ವಿಷಯ ಪ್ರಸ್ತಾಪಿಸಿ, ಮಾದಕ ವಸ್ತು ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ ಅಡಿಕೆಯನ್ನು ಡ್ರಗ್ಸ್ ಪಟ್ಟಿಗೆ ಸೇರ್ಪಡೆ ಮಾಡಿರುವುದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಸುಗ್ಗಿ ಕಾಲದಲ್ಲಿ ಈ ರೀತಿ ಮಾಡುವುದರಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಮತ್ತೊಬ್ಬ ಶಾಸಕ ಆರಗ ಜ್ಞಾನೇಂದ್ರ, 2 ಸಾವಿರ ರೂ.ನಷ್ಟು ಅಡಿಕೆ ಬೆಲೆ ಕುಸಿದಿದೆ. ಕೂಡಲೇ ಡ್ರಗ್ಸ್ ಪಟ್ಟಿಯಿಂದ ಅಡಿಕೆಯನ್ನು ಕೈಬಿಡಿ ಎಂದು ಒತ್ತಾಯಿಸಿದರು. ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ಯು.ಟಿ.ಖಾದರ್ ಸಹ ಇದಕ್ಕೆ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೆಬ್‍ಸೈಟ್‍ನಲ್ಲಿ ತಪ್ಪಾಗಿ ಮುದ್ರಣವಾಗಿದ್ದು, ಸರಿಪಡಿಸುವ ಭರವಸೆ ನೀಡಿದರು.