ಕರ್ನಾಟಕ

karnataka

ETV Bharat / state

ರಾಜೀನಾಮೆಗೆ ಮುನ್ನ, ನಂತರ ಕುಟುಂಬ ಸದಸ್ಯರ ಜೊತೆ ಕಾಲ ಕಳೆದ ಬಿಎಸ್​ವೈ

ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ತೊರೆಯುವ ಮೊದಲ ಒಂದು ದಿನ ಇಡೀ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ಅಷ್ಟೇ ಅಲ್ಲ, ರಾಜೀನಾಮೆ ನೀಡಿದ ಬಳಿಕ ಫ್ಯಾಮಿಲಿ ಜೊತೆ ಹೋಟೆಲ್​​ಗೆ ತೆರಳಿ ಊಟ ಮಾಡುವ ಮೂಲಕ ನಿರಾಳರಾಗಿದ್ದಾರೆ..

ಕುಟುಂಬ ಸದಸ್ಯರ ಜೊತೆ ಕಾಲ ಕಳೆದ ಬಿಎಸ್​ವೈ
ಕುಟುಂಬ ಸದಸ್ಯರ ಜೊತೆ ಕಾಲ ಕಳೆದ ಬಿಎಸ್​ವೈ

By

Published : Jul 26, 2021, 11:00 PM IST

Updated : Jul 27, 2021, 6:07 AM IST

ಬೆಂಗಳೂರು :ಸದಾಸಭೆ,ಸಮಾರಂಭ,ಪ್ರವಾಸ ಎಂದು ಬಿಡುವಿಲ್ಲದ ಕೆಲಸದಲ್ಲಿಯೇ ಇರುತ್ತಿದ್ದ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆ ತೊರೆಯುವ ಮೊದಲ ಒಂದು ದಿನ ಇಡೀ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ರಾಜೀನಾಮೆ ನಂತರವೂ ಕುಟುಂಬ ಸದಸ್ಯರು ಬಿಎಎಸ್​ವೈ ಜೊತೆಯಲ್ಲಿಯೇ ಇದ್ದು ಆತ್ಮಸ್ಥೈರ್ಯ ತುಂಬಿದರು.

ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ ಭಾನುವಾರ ಸಂಜೆಯೇ ಸಿಎಂ ಯಡಿಯೂರಪ್ಪ ಕುಟುಂಬ ಯಡಿಯೂರಪ್ಪ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿತು. ಯಡಿಯೂರಪ್ಪ ಪುತ್ರರಾದ ರಾಘವೇಂದ್ರ, ವಿಜಯೇಂದ್ರ, ಪುತ್ರಿ ಅರುಣದೇವಿ, ಪದ್ಮಾವತಿ, ಉಮಾದೇವಿ ಕುಟುಂಬ ಸದಸ್ಯರು ಆಗಮಿಸಿದರು‌. ಮಕ್ಕಳು ಮೊಮ್ಮಕ್ಕಳನ್ನು ಬರಮಾಡಿಕೊಂಡ ಯಡಿಯೂರಪ್ಪ ರಾಜೀನಾಮೆ ಹಿಂದಿನ ದಿನದ ಸಂಜೆ ಮೊಮ್ಮಕ್ಕಳ ಜೊತೆ ಕಾಲ ಕಳೆದಿದ್ದರು.

ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ ನಂತರವೂ ಕಾವೇರಿಗೆ ಆಗಮಿಸಿದ ಕುಟುಂಬ ಸದಸ್ಯರು ಸಿಎಂ ಜೊತೆ ಕಾಲ ಕಳೆದರು. ನಂತರ ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ತೆರಳಿದ ಯಡಿಯೂರಪ್ಪ ಕುಟುಂಬ ಸದಸ್ಯರ ಜೊತೆ ಭೋಜನ ಸವಿದರು.

ಇದನ್ನೂ ಓದಿ:ಹೆದರಿಸಿ ಯಡಿಯೂರಪ್ಪನಿಂದ ರಾಜೀನಾಮೆ ಕೊಡಿಸಿದ್ದಾರೆ : ವಿಪಕ್ಷ ನಾಯಕ ಸಿದ್ದರಾಮಯ್ಯ

Last Updated : Jul 27, 2021, 6:07 AM IST

ABOUT THE AUTHOR

...view details