ಬೆಂಗಳೂರು:ಕೊರೊನಾ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಲಕ್ಷಾಂತರ ವಿದ್ಯಾರ್ಥಿಗಳು ಎದುರಿಸಿದ್ದರು. ಇಂದು ಪ್ರಕಟವಾದ ಫಲಿತಾಂಶದಲ್ಲಿ ಬರೋಬ್ಬರಿ 157 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದು, ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಅನುಭವ ಹಂಚಿಕೊಂಡ SSLC ಯಲ್ಲಿ ಔಟ್ ಆಫ್ ಔಟ್ ಅಂಕ ಪಡೆದ ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಮಗ ಅಥವಾ ಮಗಳು ಮಾಡಿದ ಸಾಧನೆಯ ಖುಷಿಯಿಂದ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ, ಮಾಧ್ಯಮಗಳೊಂದಿಗೆ ವಿದ್ಯಾರ್ಥಿಗಳು ಈಟಿವಿ ಭಾರತದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಶ್ರೀವಿದ್ಯಾಮಂದಿರ ಹೈ ಸ್ಕೂಲ್ ವಿದ್ಯಾರ್ಥಿ ಅಮಿತ್ ಪ್ರಕಾಶ್ ಮಾತಾನಾಡಿ, 625ಕ್ಕೆ625 ಅಂಕ ಬಂದಿರೋದಕ್ಕೆ ಖುಷಿ ಇದ್ದು, ಪರೀಕ್ಷೆ ನಡೆಸದೆ ಪಾಸ್ ಮಾಡಿದ್ರೆ ಸರಿ ಅನಿಸುತ್ತಿರಲಿಲ್ಲ. ಇಷ್ಟು ಅಂಕಗಳು ಬರುವ ನಿರೀಕ್ಷೆ ಇರಲಿಲ್ಲ. ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರ ಸಹಕಾರ ಹೆಚ್ಚಿತ್ತು. ಹಾರ್ಡ್ ವರ್ಕ್ ಜೊತೆಗೆ ಸ್ಮಾರ್ಟ್ ವರ್ಕ್ ಕೂಡ ಬೇಕು ಎಂದು ಸಂತಸ ಹಂಚಿಕೊಂಡರು.
ಹಾರ್ಡ್ ವರ್ಕ್ ಜೊತೆಗೆ ಪೇರೆಂಟ್ಸ್ ಸಪೋರ್ಟ್ ಇತ್ತು:
ಬಳಿಕ ವಿದ್ಯಾರ್ಥಿನಿ ಅದಿತಿ ಮಾತನಾಡಿ, ನನ್ನ ಹಾರ್ಡ್ವರ್ಕ್ಗೆ ಉತ್ತಮ ಅಂಕ ಸಿಕ್ಕಿದೆ. ಮನೆಯಲ್ಲಿ ಪೋಷಕರು ಹಾಗೂ ಸಂಬಂಧಿಕರ ಬೆಂಬಲ ಅದ್ಭುತವಾಗಿತ್ತು. ಕೋವಿಡ್ ಕಾರಣಕ್ಕೆ ಆನ್ಲೈನ್ ಪರೀಕ್ಷೆ ನಡೆಸುವುದು ಇಷ್ಟವಿರಲಿಲ್ಲ. ಆಫ್ಲೈನ್ ಪರೀಕ್ಷೆ ಮಾಡಿದ್ದು ಒಳ್ಳೆಯದು ಆಯ್ತು. ಶಾಲೆಯಲ್ಲಿ ನಮ್ಮ ಶಿಕ್ಷಕರ ಬೆಂಬಲವೂ ಇತ್ತು. ಯಾವುದೇ ಅನುಮಾನಗಳು ಇದ್ದರೂ ಪರಿಹಾರಿಸುತ್ತಿದ್ದರು. ಔಟ್ ಆಫ್ ಔಟ್ ಬಂದಿರುವುದು ಖುಷಿ ತಂದಿದೆ ಎಂದರು.
ಶಾಲೆಯಲ್ಲಿ ಒಳ್ಳೆ ಟ್ರೈನಿಂಗ್ ಸಿಕ್ತು:
ಸೌಂದರ್ಯ ಹೈಸ್ಕೂಲ್ನ ವಿದ್ಯಾರ್ಥಿ ಕೌಶಿಕ್.ಜಿ.ಎಂ ತಮ್ಮ ಸಂತಸ ಹಂಚಿಕೊಂಡರು. 625ಕ್ಕೆ625 ಅಂಕ ಬಂದಿರುವುದು ಖುಷಿ ತಂದಿದೆ. ಕುಟುಂಬದವರು ಸಂತಸದಲ್ಲಿದ್ದು, ಒಳ್ಳೆಯ ತರಬೇತಿ ಕೊಡಿಸಿದ್ದರು. ಶಾಲೆಯಲ್ಲಿ ಆನ್ಲೈನ್ ಕ್ಲಾಸ್ ಹಾಗೂ ಹೊರಗೂ ಕೂಡ ಟ್ರೈನಿಂಗ್ ಪಡೆದಿದ್ದು ಸಹಾಯವಾಯ್ತು ಎಂದರು.
ಓದಿ: SSLC ಫಲಿತಾಂಶ ಪ್ರಕಟ: ಬೇರೆಯವರಿಂದ ಪರೀಕ್ಷೆ ಬರೆಸಿದ್ದ ವಿದ್ಯಾರ್ಥಿನಿ ಡಿಬಾರ್, ಉಳಿದವರೆಲ್ಲರೂ ಪಾಸ್
ಪೂರ್ಣ ಪ್ರಜ್ಞಾ ಹೈ ಸ್ಕೂಲ್ನ ವಿದ್ಯಾರ್ಥಿನಿ ನಿತ್ಯಾ.ಕೆ.ವಿ ಮಾತನಾಡಿ, ನನ್ನ ಸಾಧನೆಗೆ ಪೋಷಕರು, ಶಿಕ್ಷಕರು ಬೆಂಬಲವಾಗಿ ನಿಂತಿದ್ದರು. ಅವರಿಗೆ ನಾನು ಕೃತಜ್ಞತೆಯನ್ನ ಸಲ್ಲಿಸುತ್ತೇನೆ ಎಂದರು.