ಬೆಂಗಳೂರು: ಪೊಲೀಸ್ ಇಲಾಖೆಯ ಕೆಲವು ವರ್ಗದ ಹುದ್ದೆಗಳ ವೇತನ ಶ್ರೇಣಿ ಮೇಲ್ದರ್ಜೆಗೇರಿಸುವ 6ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಸುತ್ತೋಲೆ ಹೊರಡಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಿನಿಂದಲೇ ಪೊಲೀಸರಿಗೆ ಸಿಗುತ್ತಾ ಪರಿಷ್ಕೃತ ವೇತನ? - ಪೊಲೀಸ್ ಮಹಾನಿರ್ದೇಶಕಿ ನೀಲಮಣಿ
ಪೊಲೀಸ್ ಇಲಾಖೆಯ ಕೆಲವು ವರ್ಗದ ಹುದ್ದೆಗಳ ವೇತನ ಶ್ರೇಣಿ ಮೇಲ್ದರ್ಜೆಗೇರಿಸುವ 6ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಸುತ್ತೋಲೆ ಹೊರಡಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಿನಿಂದಲೇ ಔರಾದಕಾರ್ ವೇತನ ಜಾರಿ: ಭರವಸೆ ಮೂಡಿಸಿದ ಹೊಸ ಸುತ್ತೋಲೆ
ಪೊಲೀಸ್ ಅಧಿಕಾರಿಗಳ ವೇತನ ಪರಿಷ್ಕರಣೆ ಲೆಕ್ಕಾಚಾರ ಸರ್ಕಾರದ ಹಂತದಲ್ಲಿದ್ದು, ಎರಡ್ಮೂರು ದಿನಗಳೊಳಗಾಗಿ ಇತ್ಯರ್ಥಗೊಳ್ಳಲಿದೆ. ಪರಿಷ್ಕೃತ ವೇತನವನ್ನು ಸೆಪ್ಟೆಂಬರ್ ತಿಂಗಳಲ್ಲೇ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಪರಿಷ್ಕರಣೆ ಲೆಕ್ಕಾಚಾರದ ಸಂಪೂರ್ಣ ವಿವರಗಳನ್ನು ಮೂರ್ನಾಲ್ಕು ದಿನಗಳೊಳಗಾಗಿ ಎಲ್ಲಾ ಘಟಕದ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.