ಜೈಪುರ/ಬೆಂಗಳೂರು:ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್ ಲ್ಯಾಂಡರ್ ಅನ್ನು ನಾಸಾ ಪತ್ತೆ ಮಾಡಿರುವ ಬಗ್ಗೆ ಮಂಗಳವಾರ ಅಧಿಕೃತ ಪ್ರಕಟಣೆ ರಿಲೀಸ್ ಮಾಡಿದೆ. ಇದರ ಬಗ್ಗೆ ಇಸ್ರೋ ಮುಖ್ಯಸ್ಥ ಕೆ.ಸಿವನ್ ಪ್ರತಿಕ್ರಿಯೆ ನೀಡಿದ್ದಾರೆ.
ಕೊನೆಗೂ ಪತ್ತೆಯಾದ 'ವಿಕ್ರಮ'...! ನಾಸಾದಿಂದ ಪೋಟೋ ರಿಲೀಸ್, ಅನುಮಾನಕ್ಕೆ ತೆರೆ
"ನಾಸಾ ಲ್ಯಾಂಡರ್ ಪತ್ತೆ ಮಾಡುವ ಕೆಲ ತಿಂಗಳ ಮುನ್ನವೇ ಅಂದರೆ, ಸೆ.9ರಂದೇ ನಮ್ಮ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಪತ್ತೆ ಮಾಡಿತ್ತು. ಆದರೆ, ಸಂಪರ್ಕ ಮರುಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸಂಶಯವಿದ್ದರೆ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲಿಸಿ" ಎಂದು ಕೆ.ಸಿವನ್ ಹೇಳಿದ್ದಾರೆ.
ಲ್ಯಾಂಡರ್ ಪತ್ತೆ ಬಗ್ಗೆ ಇಸ್ರೋ ಮುಖ್ಯಸ್ಥ ಕೆ.ಸಿವನ್ ಪ್ರತಿಕ್ರಿಯೆ
ಮಂಗಳವಾರ ವಿಕ್ರಮ್ ಲ್ಯಾಂಡರ್ ನಮ್ಮ ಆರ್ಬಿಟರ್ ಪತ್ತೆ ಮಾಡಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿತ್ತು. ಈ ಕಾರ್ಯದಲ್ಲಿ ತಮಿಳುನಾಡು ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣ್ಯಂ ನೀಡಿದ್ದ ಮಾಹಿತಿ ನಿರ್ಣಾಯಕವಾಗಿತ್ತು ಎಂದು ನಾಸಾ ತಿಳಿಸಿತ್ತು.‘
ನಾಸಾಗೂ ಅಸಾಧ್ಯವಾದ ವಿಕ್ರಮ್ ಲ್ಯಾಂಡರ್ ಪತ್ತೆ ಮಾಡಿದ್ದು ಓರ್ವ ಭಾರತೀಯ..!