ಕರ್ನಾಟಕ

karnataka

ETV Bharat / state

ಮಂಡ್ಯದಿಂದ ನಮ್ಮ ಕುಟುಂಬ ದೂರ ಮಾಡಲು ಬಿಡಲ್ಲ: ಅಂಬಿ ಪುತ್ರನ ಗುಡುಗು - ಮಂಡ್ಯ

ನಮ್ಮನ್ನು ಮಂಡ್ಯದಿಂದ ದೂರಮಾಡಲು ಪ್ರಯತ್ನಗಳು ನಡೀತಿವೆ. ಆದರೆ, ನಾನು ಅದಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಅಂಬಿ ಪುತ್ರ ಅಭಿಷೇಕ್ ಗೌಡ​ ಗುಡುಗಿದ್ದಾರೆ.

ಅಂಬರೀಶ್ ಪುತ್ರ ಅಭಿಷೇಕ್​

By

Published : Mar 18, 2019, 8:09 PM IST

ಬೆಂಗಳೂರು: ಕೆಲವರು ನಮ್ಮ ಕುಟುಂಬವನ್ನು ಮಂಡ್ಯದಿಂದ ದೂರ‌ ಇಡಲು‌ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾನು ಅದಕ್ಕೆ ಅವಕಾಶ ನೀಡಲ್ಲ ಎಂದು ಅಂಬಿ ಪುತ್ರ ಅಭಿಷೇಕ್ ಗೌಡ ಅಂಬರೀಶ್ ಗುಡುಗಿದ್ದಾರೆ.

ಅಂಬರೀಶ್ ಪುತ್ರ ಅಭಿಷೇಕ್​

ತಾಯಿ ಸುಮಲತಾ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತ‌ನಾಡಿದ ಅವರು, ನಾವು ಮಂಡ್ಯ ಜನರ ಅಪೇಕ್ಷೆ ಮೇರೆಗೆ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ತಾಯಿ ಜನತೆಯ ಬಯಕೆಯಂತೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ಇಂದು ಇಲ್ಲಿಗೆ ನಮ್ಮ ಕುಟುಂಬದ ಇಬ್ಬರು ಅಣ್ಣಂದಿರು ಬಂದಿದ್ದಾರೆ. ನಮಗೆ ಇದು ದೊಡ್ಡ ಬಲವಾಗಿದೆ. ನಾನು ರಾಜಕೀಯ ಪ್ರವೇಶ ಮಾಡಲು ಪೂರಕವಾಗಿ ತಾಯಿ ರಾಜಕೀಯಕ್ಕೆ ಬರುತ್ತಿಲ್ಲ. ಅಲ್ಲದೆ ನಾನು ನಟನಾಗುತ್ತೇನೆ. ನಮ್ಮ ತಾಯಿ ಕೂಡ ಪ್ಲಾನ್ ಮಾಡಿ ರಾಜಕೀಯಕ್ಕೆ‌ ಬಂದಿಲ್ಲ ಎಂದರು.

ಅಭಿಷೇಕ್ ಸ್ಟಾರ್ ಆಗಲು ಬೆಂಬಲಿಸುತ್ತೇವೆ. ರಾಜಕೀಯಕ್ಕೆ ಬೆಂಬಲ ನೀಡಲ್ಲ ಎನ್ನುವ ದೇವೇಗೌಡರ ಕುಟುಂಬದ ಹೇಳಿಕೆಗೆ ಟಾಂಗ್ ನೀಡಿದ ಅಭಿಷೇಕ್, ಸ್ಟಾರ್ ಆಗಲಿ, ರಾಜಕೀಯದಲ್ಲಾಗಲಿ ಯಾರನ್ನೂ ಪಕ್ಷ ಬೆಳೆಸಲ್ಲ, ಜನ ಬೆಳೆಸಲಿದ್ದಾರೆ. ನಮ್ಮ ತಾಯಿಗೆ ನಾನು ಅಡ್ವೈಸ್ ಮಾಡುವಷ್ಟು ದೊಡ್ಡವನಲ್ಲ. ಆದರೆ, ನನ್ನ ಫ್ರೆಂಡ್​ಗೆ ಅಡ್ವೈಸ್ ಮಾಡೋಕೆ ತುಂಬಾ ದೊಡ್ಡವರಿದ್ದಾರೆ ಅವರು ಮಾಡುತ್ತಾರೆ. ನಾನು ಅಡ್ವೈಸ್ ಮಾಡಲ್ಲ ಎಂದು ಪರೋಕ್ಷವಾಗಿ ಟೀಕೆ ಮಾಡಿದರು.

ABOUT THE AUTHOR

...view details