ಕರ್ನಾಟಕ

karnataka

ETV Bharat / state

ಸಂತೋಷ್ ನೇಮಕ: ಹಿರಿಯ ಸಿಎಂ ಕಾರ್ಯದರ್ಶಿಗಳಲ್ಲಿ ಅಸಮಾಧಾನ..? - ಬೆಂಗಳೂರು

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ಅವರನ್ನು ನೇಮಿಸಿ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಇತರ ಹಿರಿಯ ಸಿಎಂ ರಾಜಕೀಯ ಕಾರ್ಯದರ್ಶಿಗಳಲ್ಲಿ ಅತೃಪ್ತಿ ಮನೆ ಮಾಡಿದೆ ಎನ್ನಲಾಗಿದೆ.

NR Santosh appointed as CM's political secretary
ಸಂತೋಷ್ ನೇಮಕ: ಇತರೆ ಮೂವರು ಹಿರಿಯ ಸಿಎಂ ಕಾರ್ಯದರ್ಶಿಗಳಲ್ಲಿ ಅಸಮಾಧಾನ

By

Published : May 30, 2020, 10:37 PM IST

ಬೆಂಗಳೂರು: ಎನ್.ಆರ್. ಸಂತೋಷ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿದ ಹಿನ್ನೆಲೆ ಇತರೆ ಅನುಭವಿ ಮೂವರು ಸಿಎಂ ರಾಜಕೀಯ ಕಾರ್ಯದರ್ಶಿಗಳು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ
ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ಅವರನ್ನು ನೇಮಕದ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಹಿರಿಯ ಸಿಎಂ ರಾಜಕೀಯ ಕಾರ್ಯದರ್ಶಿಗಳಲ್ಲಿ ಅತೃಪ್ತಿ ಮನೆ ಮಾಡಿದೆ. ಈಗಾಗಲೇ ಹಿರಿಯ ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಶಂಕರ ಗೌಡ ಪಾಟೀಲ್ ಅವರನ್ನು ಸಿಎಂರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಎನ್.ಆರ್. ಸಂತೋಷ್ ಅವರನ್ನು ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗಿ ಇದೀಗ ನೇಮಕಗೊಂಡಿದ್ದಾರೆ. ಮೂರು ನಾಲ್ಕು ಬಾರಿ ಶಾಸಕರಾಗಿ, ಮಾಜಿ ಸಚಿವರಾಗಿದ್ದವರಿಗೆ ಸಿಎಂರ ರಾಜಕೀಯ ಕಾರ್ಯದರ್ಶಿಯ ಹುದ್ದೆ ನೀಡಲಾಗಿದೆ. ಆದರೆ, ಯಾವುದೇ ರಾಜಕೀಯ ಅನುಭವ ಹೊಂದಿಲ್ಲದ, ಯುವಕನನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಹಿರಿಯರ ಅಸಮಾಧಾನಕ್ಕೆ ಕಾರಣವಾಗಿದೆ.
ಮಾಜಿ ಸಚಿವ ರೇಣುಕಾಚಾರ್ಯ
ಸಾಮಾನ್ಯವಾಗಿ ನಾಲ್ಕೈದು ಬಾರಿ ಶಾಸಕರಾದವರನ್ನು, ರಾಜಕೀಯ ಅನುಭವ ಹೊಂದಿದವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡುವುದು ವಾಡಿಕೆ. ಆದರೆ, ಇಲ್ಲಿ ಹೊಸಬರಿಗೆ ಮಣೆ ಹಾಕಿರುವುದು ಮೂವರು ಹಿರಿಯ ರಾಜಕೀಯ ಕಾರ್ಯದರ್ಶಿಗಳ ಅಸಮಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆ ಮೂಲಕ ತಮ್ಮ ಅನುಭವಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂಬ ಅತೃಪ್ತಿ ಕಾಡುತ್ತಿದೆ ಎಂದು ಹೇಳಲಾಗಿದೆ.

ABOUT THE AUTHOR

...view details