ಕರ್ನಾಟಕ

karnataka

ETV Bharat / state

ಕೊರೊನಾ ಲಾಕ್​​ಡೌನ್ ಎಫೆಕ್ಟ್.. ಬಹುತೇಕ ಮಕ್ಕಳ ಪಾಲನಾ ಕೇಂದ್ರಗಳು ತಾತ್ಕಾಲಿಕ ಶಟ್‌ಡೌನ್.. - ಅನಾಥಾಶ್ರಮಗಳು ತಾತ್ಕಾಲಿಕ ಶಟ್​ಡೌನ್​

ಖಾಸಗಿ ಹಾಗೂ ಎನ್‌ಜಿಒಗಳು ನಡೆಸುತ್ತಿರುವ 160 ನೋಂದಾಯಿಸಿದ ಮಕ್ಕಳ ಪಾಲನಾ ಕೇಂದ್ರಗಳು ಅಥವಾ ಅನಾಥಾಶ್ರಮಗಳು ಬಹುತೇಕವಾಗಿ ತಾತ್ಕಾಲಿಕ ಬಂದ್ ಆಗಿವೆ. ಅನಿವಾರ್ಯವಾಗಿ ತೆರೆದಿಟ್ಟಿರುವ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಸೂಕ್ತ ಆರೋಗ್ಯ ಸುರಕ್ಷತಾ ವ್ಯವಸ್ಥೆ ನೀಡಲಾಗಿದೆ.

orphanages teprorary shutdown due to corona panic
ಕೊರೊನಾ ಲಾಕ್​​ಡೌನ್ ಎಫೆಕ್ಟ್

By

Published : Apr 9, 2020, 8:09 PM IST

ಬೆಂಗಳೂರು :ನಗರದಲ್ಲಿ ಅನಾಥ, ನಿರಾಶ್ರಿತ ಹಾಗೂ ಬಡ ಮಕ್ಕಳಿಗಾಗಿ ಮಕ್ಕಳ ಪಾಲನಾಕೇಂದ್ರ, ಅನಾಥಾಶ್ರಮಗಳಿದ್ದು, ಕೊರೊನಾ ಭೀತಿ ಹಿನ್ನೆಲೆ ಅನೇಕರನ್ನು ತಮ್ಮ ಮನೆಗಳಿಗೆ ವಾಪಸ್‌ ಕಳುಹಿಸಲಾಗಿದೆ.

ಕೊರೊನಾ ಲಾಕ್​​ಡೌನ್ ಎಫೆಕ್ಟ್..

ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಮನೆ-ಸಂಬಂಧಿಕರ ಮನೆಗೆ ಮಕ್ಕಳನ್ನು ಕಳುಹಿಸಲಾಗಿದೆ. ಖಾಸಗಿ ಹಾಗೂ ಎನ್‌ಜಿಒಗಳು ನಡೆಸುತ್ತಿರುವ 160 ನೋಂದಾಯಿಸಿದ ಮಕ್ಕಳ ಪಾಲನಾ ಕೇಂದ್ರಗಳು ಅಥವಾ ಅನಾಥಾಶ್ರಮಗಳು ಬಹುತೇಕವಾಗಿ ತಾತ್ಕಾಲಿಕ ಬಂದ್ ಆಗಿವೆ. ಅನಿವಾರ್ಯವಾಗಿ ತೆರೆದಿಟ್ಟಿರುವ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಸೂಕ್ತ ಆರೋಗ್ಯ ಸುರಕ್ಷತಾ ವ್ಯವಸ್ಥೆ ನೀಡಲಾಗಿದೆ.

ಹಾಗೇ ಸರ್ಕಾರದ ಆರು ವಿವಿಧ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ಶಿಶುಮಂದಿರ, ಬುದ್ಧಿಮಾಂದ್ಯ ಮಕ್ಕಳ ಕೇಂದ್ರ, ಸರ್ಕಾರಿ ವೀಕ್ಷಣಾಲಯ ಹಾಗೂ ಸಂಘರ್ಷಕ್ಕೊಳಗಾದ ಮಕ್ಕಳ ಕೇಂದ್ರಗಳಿವೆ. ಇಲ್ಲಿಯೂ ಸಿಬ್ಬಂದಿ, ನೌಕರರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಆಹಾರ, ಆರೋಗ್ಯಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸುಮಂಗಲಿ ಸೇವಾಶ್ರಮ ಟ್ರಸ್ಟ್ ತಮ್ಮಲ್ಲಿದ್ದ 98 ಮಕ್ಕಳನ್ನೂ ಕೂಡಾ ಸುರಕ್ಷಿತವಾಗಿ ಮನೆ ಸೇರಿಸಿದ್ದಾರೆ. ಇಲ್ಲಿನ ಸ್ಥಿತಿಗತಿ ಹಾಗೂ ಮಕ್ಕಳ ಪಾಲನಾ ಕೇಂದ್ರಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

...view details