ಬೆಂಗಳೂರು:ಈ ಮುಂಚೆ 2019-2020ನೇ ಸಾಲಿನ ವರ್ಗಾವಣೆಗೆ ಜೂನ್ 30ರ ಕಾಲಮಿತಿಯನ್ನು ವಿಧಿಸಲಾಗಿತ್ತು. ಇದೀಗ ಸರ್ಕಾರ ವರ್ಗಾವಣೆ ಅವಧಿಯನ್ನು ವಿಸ್ತರಿಸುವುದು ಅಗತ್ಯವೆಂದು ಪರಿಗಣಿಸಿ ಜುಲೈ 10ರವರೆಗೆ ಸರ್ಕಾರಿ ನೌಕರರ ವರ್ಗಾವಣೆ ಅವಧಿಯನ್ನು ವಿಸ್ತರಿಸಿದೆ.
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಕಾಲಮಿತಿ ಜುಲೈ 10ಕ್ಕೆ ವಿಸ್ತರಿಸಿ ಆದೇಶ - undefined
2019-2020ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಜುಲೈ 10ಕ್ಕೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಮುಂಚೆ ಸಾರ್ವತ್ರಿಕ ವರ್ಗಾವಣೆ ಮಿತಿಯನ್ನು ಶೇ. 2ಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದ್ದ ಮೈತ್ರಿ ಸರ್ಕಾರ, ಜೂನ್ 20ಕ್ಕೆ ಮಿತಿಯನ್ನು ಶೇ. 6ಕ್ಕೆ ಏರಿಸಿ ಪರಿಷ್ಕೃತ ಆದೇಶ ಹೊರಡಿಸಿತ್ತು. 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾ ಬಲದ ಶೇ. 6ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿತ್ತು.
ಮೊದಲು ವಿಧಿಸಿದ್ದ ಜೂನ್ 30ರ ಕಾಲಮಿತಿಗೆ ಇನ್ನು 10 ದಿನ ಇರುವಾಗ ಸರ್ಕಾರ ಸಾರ್ವತ್ರಿಕ ವರ್ಗಾವಣೆಯ ಪರಿಷ್ಕೃತ ಆದೇಶ ಹೊರಡಿಸಿತ್ತು. ಹೀಗಾಗಿ ಸರ್ಕಾರ ಕಾಲಮಿತಿಯನ್ನು ವಿಸ್ತರಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಸರ್ಕಾರ ಕಾಲಮಿತಿಯನ್ನು ಜುಲೈ 10ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದೆ.