ಬೆಂಗಳೂರು :ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ (ಕೋವಿಡ್-19) ಹಿನ್ನೆಲೆಯಲ್ಲಿ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ವಿಧಾನಮಂಡಲ/ವಿಧಾನಸಭೆಯ ಎಲ್ಲಾ ಸಮಿತಿಗಳ ಸಭೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಅಗತ್ಯವಿರುವ ಅಧಿಕಾರಿಗಳೊಂದಿಗೆ ನಡೆಸಲು ಎಲ್ಲಾ ಸಮಿತಿಗಳ ಅಧ್ಯಕ್ಷರುಗಳಿಗೆ ತಿಳಿಸಲಾಗಿತ್ತು.
ವಿಧಾನಮಂಡಲ, ವಿಧಾನಸಭೆ ಸಮಿತಿಗಳ ಸಭೆ ಸದ್ಯಕ್ಕೆ ನಡೆಸದಿರಲು ತೀರ್ಮಾನ - ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ
ರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾ ವೈರಸ್ ಹರಡುತ್ತಿರುವುದರಿಂದ ಹಾಗೂ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದರಿಂದ ಅನಿವಾರ್ಯವಾಗಿ ಸಮಿತಿ ಸಭೆಗಳನ್ನು ನಡೆಸದೇ ಇರುವುದು ಸೂಕ್ತ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.
ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ
ಆದರೆ, ರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾ ವೈರಸ್ ಹರಡುತ್ತಿರುವುದರಿಂದ ಹಾಗೂ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದರಿಂದ ಅನಿವಾರ್ಯವಾಗಿ ಸಮಿತಿ ಸಭೆಗಳನ್ನು ನಡೆಸದೇ ಇರುವುದು ಸೂಕ್ತವಾಗಿದೆ.
ಹೀಗಾಗಿ, ಮುಂದಿನ ಆದೇಶದವರೆಗೂ ಸಮಿತಿ ಸಭೆಗಳನ್ನು ಸ್ಥಗಿತಗೊಳಿಸಲು ವಿಧಾನಸಭೆಯ ಸಭಾಧ್ಯಕ್ಷರು ಅದೇಶಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.