ಕರ್ನಾಟಕ

karnataka

ETV Bharat / state

ಉದ್ಯಾನನಗರಿಗರ ಆರ್ಕಿಡ್ ಕ್ರೇಜ್....ಸಸ್ಯಕಾಶಿಯಲ್ಲಿ ಅಂದ ಚೆಂದದ ಫ್ಲವರ್ಸ್..! - latest bangalore news

ಲಾಲ್​ಬಾಗ್​ನಲ್ಲಿ ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕದಿಂದ ಎರಡು ದಿನದ ಆರ್ಕಿಡ್ ಶೋ ಆಯೋಜಿಸಲಾಗಿದ್ದು, ಮೊದಲ ದಿನವೇ ಶೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಉದ್ಯಾನನಗರೀಗರ ಆರ್ಕಿಡ್ ಕ್ರೇಜ್....ಸಸ್ಯಕಾಶಿಯಲ್ಲಿ ಅಂದ ಚೆಂದದ ಆರ್ಕಿಡ್ ಫ್ಲವರ್ಸ್... !

By

Published : Oct 19, 2019, 8:10 PM IST

Updated : Oct 19, 2019, 8:16 PM IST

ಬೆಂಗಳೂರು: ಇಂದಿನಿಂದ ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕದಿಂದ ಎರಡು ದಿನದ ಆರ್ಕಿಡ್ ಶೋ ಆಯೋಜಿಸಲಾಗಿದ್ದು, ಮೊದಲ ದಿನವೇ ಶೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ವಿಕೆಂಡ್​​ ಮಜಾ ಮಾಡಬೇಕೆಂದು ಬಂದವರಿಗೆ ಹೊಸ ಲೋಕವೇ ಸೃಷ್ಟಿಯಾಗಿದಂತಿದೆ. ಒಂದೆಡೆ ಡೆಂಡ್ರೋಬಿಯಂ, ಇನ್ನೊಂದೆಡೆ ಅಫಿಡೆಂಡ್ರಾ, ಮತ್ತೊಂದೆಡೆ ಕಣ್ಣು ಹಾಯಿಸಿದ್ರೆ ಫರಿಯಾನಮ್ ಹೀಗೆ ಸಾಕಷ್ಟು ಆರ್ಕಿಡ್ ಹೂಗಳು ಕಣ್ಮನ ಸೇಳೆಯುತ್ತಿದೆ. ಇನ್ನೂ ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಆರ್ಕಿಡ್​ಗಳ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.

ಉದ್ಯಾನನಗರೀಗರ ಆರ್ಕಿಡ್ ಕ್ರೇಜ್....ಸಸ್ಯಕಾಶಿಯಲ್ಲಿ ಅಂದ ಚೆಂದದ ಆರ್ಕಿಡ್ ಫ್ಲವರ್ಸ್... !

ಇನ್ನು ಶೋನಲ್ಲಿ ಹೈಬ್ರೀಡ್ ಆರ್ಕಿಡ್​ಗಳು ಹೆಚ್ಚು ಪ್ರಾಸಸ್ಥ್ಯ ಪಡೆದಿದ್ದು, ಹೂವಿನಿಂದ ಮಾಡಿದ ಕಾಡಿನ‌ ಥೀಮ್, ಹೂವಿನ ಮಂಟಪ, ಆರ್ಕಿಡ್ ಹೂವಿನ ಗ್ಯಾಲರಿಯೂ ಎಲ್ಲರ ಗಮನ ಸೆಳೆಯಿತು. ಇನ್ನು ಈ ಹೂಗಳು ತಮ್ಮ ಆಹಾರವನ್ನ ತಾವೇ ತಯಾರಿಸಿ ಕೊಳ್ಳುತ್ತವೆ. ಒಂದು ಗಿಡ ಹೂ ಬಿಡಲು ಸುಮಾರು ವರ್ಷ ಸಮಯ ತೆಗೆದುಕೊಂಡರೂ ಹೂವಿನ ಅಂದ ಮಾತ್ರ ಬಹಳ ಚೆನ್ನಾಗಿರುತ್ತದೆ. ಸಾಮಾನ್ಯ ಹೂಗಳು ಎರಡು ರಿಂದ ಮೂರು ದಿನ ಬಾಡದೇ ಇರಬಹುದು, ಆದರೆ ಇವುಗಳು ತಿಂಗಳುಗಳ ಕಾಲ ಬಾಡದೇ ಹಾಗೇ ಅಂದವಾಗಿ ಇರುತ್ತವೆ. ಈ ಹೂಗಳ ಅಂದ ಸವಿಯಲು ಪ್ರವೇಶ ದರ 50 ನಿಗದಿ ಮಾಡಲಾಗಿದೆ. ಸದ್ಯ ಉದ್ಯಾನನಗರಿಯ ಮಂದಿಗೆ ಆರ್ಕಿಡ್ ಗುಂಗು ಹೆಚ್ಚಾಗಿದ್ದು, ಆರ್ಕಿಡ್ ಖರೀದಿಯೂ ಜೋರಾಗಿದೆ.

Last Updated : Oct 19, 2019, 8:16 PM IST

ABOUT THE AUTHOR

...view details