ಕರ್ನಾಟಕ

karnataka

ETV Bharat / state

ರೈತರ ಮೇಲೆ ಕೇಂದ್ರ ಸರ್ಕಾರದಿಂದ ದಬ್ಬಾಳಿಕೆ: ವಾಟಾಳ್ ಆಕ್ರೋಶ - ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್

ಕೇಂದ್ರ ಸರ್ಕಾರ ರೈತರನ್ನು ಹೀನಾಯವಾಗಿ ಕಾಣುತ್ತಿದ್ದು, ರೈತರು ದೆಹಲಿಗೆ ಬಾರದಿರಲಿ ಎಂದು ರಸ್ತೆ ಮೇಲೆ ತಂತಿ ಬೇಲಿ, ಕಬ್ಬಿಣದ ಮೊಳೆ ಹೊಡಿರುವುದು ಅತ್ಯಂತ ಘೋರ ಕೃತ್ಯ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

ವಾಟಾಳ್
ವಾಟಾಳ್

By

Published : Feb 6, 2021, 2:28 PM IST

ಬೆಂಗಳೂರು : ದೇಶದ ರೈತರ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಪ್ರತಿಭಟನೆ ನಡೆಸಿದರು.‌‌

ರೈತರ ಮೇಲೆ ಕೇಂದ್ರ ಸರ್ಕಾರದಿಂದ ದಬ್ಬಾಳಿಕೆ..ವಾಟಾಳ್ ಆಕ್ರೋಶ

ನಗರದ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಕೈಯಲ್ಲಿ ಗುದ್ದಲಿ ಹಿಡಿದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ರೈತರನ್ನು ಹೀನಾಯವಾಗಿ ಕಾಣುತ್ತಿದ್ದು, ರೈತರು ದೆಹಲಿಗೆ ಬಾರದಿರಲಿ ಎಂದು ರಸ್ತೆಗೆ ತಂತಿ ಬೇಲಿ, ಕಬ್ಬಿಣದ ಮೊಳೆ ಹೊಡಿರುವುದು ಅತ್ಯಂತ ಘೋರ ಕೃತ್ಯ ಎಂದು ಕಿಡಿಕಾರಿದರು.

ಪ್ರತಿಭಟನೆಗೂ ಮುನ್ನ ಮಾತಾನಾಡಿದ ವಾಟಾಳ್ ನಾಗರಾಜ್, ನರೇಂದ್ರ ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಹಿಟ್ಲರ್ ಸರ್ಕಾರವನ್ನೂ ಈ ಸರ್ಕಾರ ನಾಚಿಸುತ್ತೆ.‌ ನಮ್ಮ ಪಕ್ಷ ರೈತರ ಪರವಾಗಿರಲಿದೆ ಎಂದರು. ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ, ಅತ್ಯಂತ ಕೆಟ್ಟ ಸರ್ಕಾರವಾಗಿದ್ದು, ಈ ಹಿಂದೆ ಈ ರೀತಿ ಸರ್ಕಾರ ಅಧಿಕಾರಕ್ಕೆ ಬಂದಿರಲಿಲ್ಲ. ಯಾವುದೇ ಜಾತಿಯವರು ಯಡಿಯೂರಪ್ಪ ಅವರನ್ನ ನಂಬಬೇಡಿ. ಜಾತಿ‌ -ಜಾತಿಗಳ ನಡುವೆ ಅವರು ಒಡಕು ತರುತ್ತಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಇಡೀ ರಾಜ್ಯವನ್ನೇ ಮಾರಲು ಹೊರಟಿದ್ದಾರೆ.‌‌ ಇದು ಸರಿಯಿಲ್ಲ ಅಂತಾ ಹೇಳಿದ ಮಾಧುಸ್ವಾಮಿಗೆ ಕಾನೂನು ಖಾತೆ ಕಿತ್ತುಕೊಂಡು ಕೊನೆ ಸೀಟ್​​​ನಲ್ಲಿ ಕೂರಿಸಿದರು. ಬಿಡಿಎ ಹರಾಜು ಆಗಿ ಹೋಯ್ತು. ಮುಂದೊಂದು ದಿನ ಸುವರ್ಣ ಸೌಧ, ವಿಧಾನಸೌಧವನ್ನೂ ಯಡಿಯೂರಪ್ಪ ಮಾರುತ್ತಾರೆ ಅಂತಾ ವಾಟಾಳ್​ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details