ಕರ್ನಾಟಕ

karnataka

ETV Bharat / state

ಐಎಂವಿ ಕಾಯ್ದೆಗೆ ತೀವ್ರ ವಿರೋಧ: ಬೆಂಗಳೂರಿನಲ್ಲಿ ಆಟೋ ಚಾಲಕರ ಪ್ರತಿಭಟನೆ - IMV Act

ಅವೈಜ್ಞಾನಿಕ ದುಬಾರಿ ದಂಡ, ಕೇಂದ್ರ ಮೋಟಾರ್ ವಾಹನ ಮಸೂದೆ 2019 ತಿದ್ದುಪಡಿ ವಾಪಸ್​​ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ಆಟೋ ಚಾಲಕರ ಪ್ರತಿಭಟನೆ

By

Published : Aug 27, 2019, 9:46 PM IST

ಬೆಂಗಳೂರು: ದುಬಾರಿ ದಂಡ ವಿಧಿಸುವ ವಿಧೇಯಕ ಮತ್ತು ಐಎಂವಿ ಕಾಯಿದೆ ತಿದ್ದುಪಡಿ ವಿರೋಧಿಸಿ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಐಎಂವಿ ಕಾಯ್ದೆಗೆ ತೀವ್ರ ವಿರೋಧ: ಬೆಂಗಳೂರಿನಲ್ಲಿ ಆಟೋ ಚಾಲಕರ ಪ್ರತಿಭಟನೆ

ಅವೈಜ್ಞಾನಿಕ ದುಬಾರಿ ದಂಡ, ಕೇಂದ್ರ ಮೋಟಾರ್ ವಾಹನ ಮಸೂದೆ 2019 ತಿದ್ದುಪಡಿ ವಾಪಸ್​​ ಪಡೆಯುವಂತೆ ಒತ್ತಾಯಿಸಿದರು. ಬೆಂಗಳೂರು ನಗರವೊಂದರಲ್ಲೇ 82 ಲಕ್ಷ ವಾಹನಗಳು ನೊಂದಾಣಿಯಾಗಿದ್ದು, ಈ ವಾಹನಗಳು ಸಂಚಾರ ಮಾಡಲು ರಸ್ತೆಗಳು ವಿಸ್ತಾರವಾಗಿಲ್ಲ. ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅವೈಜ್ಞಾನಿಕ ಸಂಚಾರ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕಾಮಗಾರಿಗಳಿಂದಾಗಿ ವಾಹನಗಳ ವೇಗದ ಮಿತಿ ಗಂಟೆಗೆ 15-20 ಕಿ.ಮೀ. ಕುಸಿದಿದ್ದು, ಇದರಿಂದ ಚಾಲಕರು ಹೈರಾಣಾಗಿದ್ದಾರೆ.

ಹೀಗಿರುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಾಲಕರ ಮೇಲೆ ದಂಡ ಹೆಚ್ಚಳ ಆದೇಶಿಸಿದೆ.‌ ಈಗಾಗಲೇ ಸಂಪಾದನೆ‌ ಇಲ್ಲದೇ ಚಾಲಕರು ನಿತ್ಯ ಜೀವನ ನಡೆಸಲು ಪರದಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಐಎಂವಿ ಕಾಯ್ದೆ ವಾಪಸ್ಸಾಗಬೇಕು. ಇನ್ನು ಈ ಕಾಯ್ದೆ ಜಾರಿ ಮಾಡಿರುವ ಉದ್ದೇಶ ಆಟೋ ಇಂಡಸ್ಟ್ರಿಯಲ್ ಮಾಲೀಕರ ಲಾಬಿಗೆ ಮಣಿದು, ಅವರಿಗೆ ಲಾಭ ಮಾಡಿಕೊಡುವ ಉದ್ದೇಶವಿದೆ ಎಂದು ಆರೋಪಿಸಿದರು.

ಈ ಕಾಯಿದೆ ವಾಪಸಾತಿ ಜೊತೆಗೆ, 15 ವರ್ಷಗಳ ಹಳೆಯ ಆಟೋಗಳನ್ನು ರದ್ದುಪಡಿಸುತ್ತಿರುವುದರಿಂದ ಹಳೆ ಆಟೋಗಳಿಗೆ ಕಂಪನಿಗಳಿಂದ ದರ ನಿಗದಿಪಡಿಸಬೇಕು. ಆಟೋ‌ ಚಾಲಕರಿಗೆ ವಸತಿ ಕಲ್ಪಿಸಬೇಕು. ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲ ಸೌಲಭ್ಯದ ನೆರವು ನೀಡಬೇಕು. ಚಾಲಕರಿಗೆ ಚಾಲನಾ ಪತ್ರ ನೀಡುವಾಗ ವಿದ್ಯಾಹರ್ತೆ‌ ಕಡ್ಡಾಯಕ್ಕೆ ವಿರೋಧ, ವಾಹನಗಳ ಇನ್ಸುರೆನ್ಸ್ ಪ್ರೀಮಿಯಂ ದರ ಏರಿಕೆ‌ಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ABOUT THE AUTHOR

...view details