ಬೊಮ್ಮನಹಳ್ಳಿ(ಬೆಂಗಳೂರು): ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಇಂಧನ ಬೆಲೆಗೆ ಮಧ್ಯಮ ವರ್ಗದ ಜನ ತತ್ತರಿಸಿರುವುದನ್ನು ಮನಗಂಡು ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆದ್ದಾರಿ ವೃತ್ತದ ಬಳಿ ಪ್ರತಿಭಟಿಸಿದರು.
ಬೈಕ್ ಶವಯಾತ್ರೆ ನಡೆಸುವ ಮುಖಾಂತರ ಬೆಲೆ ಏರಿಕೆಗಳಿಗೆ ಕಡಿವಾಣ ಹಾಕದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.