ಕರ್ನಾಟಕ

karnataka

ETV Bharat / state

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ.. ಪಟಾಕಿ ಸಿಡಿಸಿ ಪ್ರತಿಭಟಿಸಿದ ವಾಟಾಳ್‌ ನಾಗರಾಜ - ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ

ಇಂದು ಮರಾಠಿ, ನಾಳೆ ತಮಿಳು, ತೆಲುಗು, ಮಲಯಾಳಂ ಪ್ರಾಧಿಕಾರ ಹೀಗೆ ಜಾರಿಯಾದರೆ ರಾಜ್ಯಕ್ಕೆ ಅಪಾಯ ಎಂದರು. ಮುಖ್ಯಮಂತ್ರಿಗಳು ಮರಾಠಿ ಪ್ರಾಧಿಕಾರ ಸ್ಥಾಪನೆ ಕೈ ಬಿಡಬೇಕು..

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ

By

Published : Nov 15, 2020, 9:08 PM IST

ಬೆಂಗಳೂರು :ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದಕ್ಕೆ 50 ಕೋಟಿ ರೂ. ಅನುದಾನ ಮೀಸಲಿಡುವಂತೆ ಆರ್ಥಿಕ ಇಲಾಖೆಗೆ ಆದೇಶಿಸಿದೆ. ಇದನ್ನು ಖಂಡಿಸಿ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ಮರಾಠ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಗಾಗಿ, ರಾಜ್ಯ ಸರ್ಕಾರ ₹50 ಕೋಟಿ ಅನುದಾನ ಮೀಸಲಿಡುವಂತೆ ಆದೇಶಿಸಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಮರಾಠಿ ಪ್ರಾಧಿಕಾರ ರಚನೆ ವಿರುದ್ಧ ವಾಟಾಳ್ ನಾಗರಾಜ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ

ಇಂದು ಮರಾಠಿ, ನಾಳೆ ತಮಿಳು, ತೆಲುಗು, ಮಲಯಾಳಂ ಪ್ರಾಧಿಕಾರ ಹೀಗೆ ಜಾರಿಯಾದರೆ ರಾಜ್ಯಕ್ಕೆ ಅಪಾಯ ಎಂದರು. ಮುಖ್ಯಮಂತ್ರಿಗಳು ಮರಾಠಿ ಪ್ರಾಧಿಕಾರ ಸ್ಥಾಪನೆ ಕೈ ಬಿಡಬೇಕು. ಇಲ್ಲವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪಟಾಕಿ ಸಿಡಿಸಿ ಆಕ್ರೋಶ ಹೊರಹಾಕಿದರು.

ABOUT THE AUTHOR

...view details