ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮುಂದಿನ ಎರಡು ದಿನ ವಿಧಾನಪರಿಷತ್ ಕಲಾಪದಲ್ಲಿ ಗೈರು ಹಾಜರಾಗಲಿದ್ದಾರೆ.
ಶುಕ್ರವಾರ ಮುಕ್ತಾಯವಾಗಬೇಕಿದ್ದ ವಿಧಾನ ಪರಿಷತ್ ಕಲಾಪ ಸಭಾಪತಿಗಳ ಆಯ್ಕೆ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ವಿಧೇಯಕ ಜಾರಿಗೆ ತರುವ ಉದ್ದೇಶದಿಂದ ಮೂರು ದಿನ ವಿಸ್ತರಿಸಿದ್ದು, ಕಲಾಪ ಬುಧವಾರದವರೆಗೂ ನಡೆಯಲಿದೆ. ಕಲಾಪ ಸೋಮವಾರಕ್ಕೆ ಮುಂದೂಡಿಕೆ ಆದ ಹಿನ್ನೆಲೆ ಶುಕ್ರವಾರ ತವರು ಜಿಲ್ಲೆ ಬಾಗಲಕೋಟೆಗೆ ತೆರಳಿದ್ದ ಎಸ್ಆರ್ ಪಾಟೀಲ್ ಅಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಸೋಮವಾರ ಕೂಡ ಕಲಾಪದಲ್ಲಿ ಭಾಗಿಯಾಗಿರಲಿಲ್ಲ. ಇನ್ನೆರಡು ದಿನ ಕೂಡ ಅವರು ಪರಿಷತ್ ಕಲಾಪದಲ್ಲಿ ಅಲಭ್ಯರಾಗಿದ್ದು ಮುಂದಿನ ಬಜೆಟ್ ಅಧಿವೇಶನಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಇದೆ.