ಕರ್ನಾಟಕ

karnataka

ETV Bharat / state

ಬಿಜೆಪಿಯ ಕರುಣಾಜನಕ ಸ್ಥಿತಿ ಸಂಪುಟ ವಿಸ್ತರಣೆ ನಂತರವೂ ಮುಂದುವರೆಯುತ್ತೆ.. ಸಿದ್ದರಾಮಯ್ಯ ಟ್ವೀಟ್ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್

ಕ್ಯಾಬಿನೆಟ್ ವಿಸ್ತರಣೆಯಲ್ಲೇ ಬಿಎಸ್​​ವೈ ಸರ್ಕಾರ ತಲ್ಲೀನವಾಗಿದ್ದು, ಅವರು ಎಂದಿಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಗೌರವಿಸಿಲ್ಲ. ಅಲ್ಲದೇ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಜಾತಿ ಮತ್ತು ಧರ್ಮದ ಅಸಮತೋಲನ ಸ್ಪಷ್ಟವಾಗಿ ಕಾಣುತ್ತಿದೆ..

Opposition leader Siddaramaiah tweet
ಸಿದ್ದರಾಮಯ್ಯ ಟ್ವೀಟ್

By

Published : Jan 13, 2021, 7:50 PM IST

ಬೆಂಗಳೂರು :ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓದಿ: ರಾಜಭವನ ಮುಂಭಾಗ ಕಾರು ಕಾಣದೆ ಪರದಾಡಿದ ಸಚಿವರು ; ಎಂಟಿಬಿ ಹೊತ್ಕೊಂಡು ಮೆರೆಸಿದ ಅಭಿಮಾನಿಗಳು

ಬಿಜೆಪಿ ಪಕ್ಷ ಪ್ರಜಾಪ್ರಭುತ್ವವನ್ನು ಎಂದಿಗೂ ನಂಬಲಿಲ್ಲ, ಇದು ಮುಂಬರುವ ಬಜೆಟ್‌ ಮೇಲೆ ಪರಿಣಾಮ ಬೀರಲಿದೆ. ಜನ ಸಾಮಾನ್ಯರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಅವರು ಎಂದಿಗೂ ಮುಂದಾಗಿಲ್ಲ. ಆದರೆ, ನಮ್ಮ ಸರ್ಕಾರ ಬಜೆಟ್‌ಗೆ ಮುಂಚಿತವಾಗಿ ವಿವಿಧ ತಂಡಗಳ ಮೂಲಕ ಸಮಾಲೋಚನೆ ನಡೆಸುತ್ತಿತ್ತು ಎಂದು ಕಿಡಿಕಾರಿದ್ದಾರೆ.

ಕ್ಯಾಬಿನೆಟ್ ವಿಸ್ತರಣೆಯಲ್ಲೇ ಬಿಎಸ್​​ವೈ ಸರ್ಕಾರ ತಲ್ಲೀನವಾಗಿದ್ದು, ಅವರು ಎಂದಿಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಗೌರವಿಸಿಲ್ಲ. ಅಲ್ಲದೇ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಜಾತಿ ಮತ್ತು ಧರ್ಮದ ಅಸಮತೋಲನ ಸ್ಪಷ್ಟವಾಗಿ ಕಾಣುತ್ತಿದೆ ಎಂದರು.

ಕರುಣಾಜನಕ ಸ್ಥಿತಿಯಲ್ಲಿರುವ ಬಿಜೆಪಿ ಸರ್ಕಾರ, ಕ್ಯಾಬಿನೆಟ್ ವಿಸ್ತರಣೆಯ ನಂತರವೂ ಮುಂದುವರಿಯುತ್ತದೆ. ಅಲ್ಲದೇ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗಿ, ಅವರಲ್ಲಿ ಹೆಚ್ಚಿನವರು ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಾರೆ. ರಾಜ್ಯ ಸರ್ಕಾರದ ಮೇಲೆ ನಮಗೆ ಜೀರೋ ಹೋಪ್ ಇದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details