ಕರ್ನಾಟಕ

karnataka

ETV Bharat / state

ಮುಂದಿನ ಚುನಾವಣೆಯಲ್ಲಿ ಯಾರು ಫೀಜ್ ಕಿತ್ತಾಹಾಕ್ತಾರೆ ಗೊತ್ತಾಗುತ್ತೆ: ಸಿದ್ದರಾಮಯ್ಯ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕುಮಾರಸ್ವಾಮಿ ಕಾಂಗ್ರೆಸ್​​ನ ಫೀಜ್ ಕಿತ್ತು ಹಾಕಿದ್ದೇನೆ ಅಂದಿದಾರೆ. ವಿಧಾನಸಭೆ ಚುನಾವಣೆ ಬರಲಿ ಯಾರು - ಯಾರ ಫೀಜ್ ಕಿತ್ತು ಹಾಕ್ತಾರೆ ಗೊತ್ತಾಗುತ್ತೆ. ಯಾರು ಫೀಜ್ ಕಿತ್ತು ಹಾಕ್ತಾರೆ. ಜನ ಯಾರ ಫೀಜ್ ಕೀಳ್ತಾರೆ ಎಲ್ಲಾ ಗೊತ್ತಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ

By

Published : Aug 31, 2021, 4:05 PM IST

ಬೆಂಗಳೂರು : ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನ್ನ ಹತ್ತಿರ ಮಾತನಾಡಿರುವುದು ಸತ್ಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹತ್ತು ದಿನಗಳ ಕಾಲ ಜಿಂದಾಲ್ ಪ್ರಕೃತಿ ಚಿಕಿತ್ಸೆ ಪಡೆದು ವಾಪಸ್​ ಆದ ನಂತರ ಶಿವಾನಂದ ವೃತ್ತ ಸಮೀಪದ ಸರ್ಕಾರಿ ನಿವಾಸ ಬಳಿ ಸುದ್ದಿಗಾರರ ಜತೆ ಮಾತನಾಡಿ, ಅವರಿಗೆ ಹಾಗೂ ಅವರ ಮಗನಿಗೆ ಇಬ್ಬರಿಗೂ ಟಿಕೆಟ್ ಕೇಳಿರುವುದು ಹೌದು‌.

ಆದರೆ ಯಾವ ಕ್ಷೇತ್ರ ಅಂತ ಹೇಳಿಲ್ಲ. ನಾನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹತ್ತಿರ ಮಾತನಾಡುತ್ತೇನೆ ಅಂತ ಹೇಳಿದ್ದೇ‌ನೆ. ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಜೆಡಿಎಸ್ ಬಗ್ಗೆ ಗೊತ್ತಿಲ್ಲ. ಜಿ.ಡಿ.ದೇವೇಗೌಡ ಬಿಟ್ಟರೆ ಬೇರೆ ಯಾರು ನನ್ನನ್ನ ಸಂಪರ್ಕಿಸಿಲ್ಲ ಎಂದರು.

ಜಿಂದಾಲ್ ಪ್ರಕೃತಿ ಚಿಕಿತ್ಸೆ ಪಡೆದು ವಾಪಸ್​ ಆದ ಸಿದ್ದರಾಮಯ್ಯ

ಪ್ರಕೃತಿ ಚಿಕಿತ್ಸೆ ಪಡೆದ ಬಗ್ಗೆ ಮಾತನಾಡಿ, ಕೊರೊನಾ ಬಂದ ಬಳಿಕ ವೇಟ್ ಜಾಸ್ತಿ ಆಗಿತ್ತು. ಹೀಗಾಗಿ ದೇಹ ಸರಿಪಡಿಸಿಕೊಳ್ಳಲು ನಾನು ಹೋಗಿದ್ದೆ. ಪ್ರತಿ ಬಾರಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಪಡೆಯುತ್ತಿದೆ. ಈ ಬಾರಿ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಪಡೆದಿದ್ದೇನೆ, ಅದು ಸಹ ಚೆನ್ನಾಗಿದೆ ಎಂದರು.

ನಾಳೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ಮಾಡುತ್ತೇನೆ:

ಮೈಸೂರು ಗ್ಯಾಂಗ್ ರೇಪ್ ಪ್ರಕರಣ ತಿಳಿದಿದೆ. ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆಯುತ್ತೇನೆ. ನಾಳೆ ಮೈಸೂರಿಗೆ ಹೋಗುತ್ತಿದ್ದೇನೆ. ಅತ್ಯಾಚಾರ ಪ್ರಕರಣದ ಸಂಬಂಧ ನಾಳೆ ಮೈಸೂರು ಹೋದ ನಂತರ ಮಾಹಿತಿ ಪಡೆದು ಅಲ್ಲೇ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದರು.

ಜಿಂದಾಲ್ ಪ್ರಕೃತಿ ಚಿಕಿತ್ಸೆ ಪಡೆದು ವಾಪಸ್​ ಆದ ಸಿದ್ದರಾಮಯ್ಯ

ಶಾಲೆ ಆರಂಭಿಸಲಿ :

ಕೊರೊನಾದಿಂದ ಬಹಳ ದಿನ ಶಾಲೆ ನಡೆಯದಿದ್ದರೂ ಕಷ್ಟ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭ ಮಾಡಲಿ. ಸ್ಕೂಲ್ ಓಪನ್ ಮಾಡದಿದ್ರೆ, ಮಕ್ಕಳು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಬಾಲ ಕಾರ್ಮಿಕರು ಆಗುವ ಸಾಧ್ಯತೆ ಇರುತ್ತೆ. ಕೊರೊನಾ ಪರಿಸ್ಥಿತಿ ನೋಡಿಕೊಂಡು ಶಾಲೆ ಆರಂಭ ಮಾಡ್ಲಿ ಎಂದು ಸಲಹೆ ನೀಡಿದರು.

ಯಾರು ಫೀಜ್ ಕಿತ್ತು ಹಾಕ್ತಾರೆ ನೋಡೋಣ:

ಕುಮಾರಸ್ವಾಮಿ ಕಾಂಗ್ರೆಸ್​​ನ ಫೀಜ್ ಕಿತ್ತು ಹಾಕಿದ್ದೇನೆ ಆಂದಿದಾರೆ. ವಿಧಾನಸಭೆ ಚುನಾವಣೆ ಬರಲಿ ಯಾರು - ಯಾರ ಫೀಜ್ ಕಿತ್ತು ಹಾಕ್ತಾರೆ ಗೊತ್ತಾಗುತ್ತೆ. ಯಾರು ಫೀಜ್ ಕಿತ್ತು ಹಾಕ್ತಾರೆ. ಜನ ಯಾರ ಫೀಜ್ ಕೀಳ್ತಾರೆ ಎಲ್ಲ ಗೊತ್ತಾಗುತ್ತೆ. ಈಶ್ವರಪ್ಪನ ಆರೋಪದ ಬಗ್ಗೆ ನಾನು ಮಾತಾಡಲ್ಲ. ಅವನಿಗೆ ನಾಲಿಗೆಗೂ ಬ್ರೈನ್ ಗೂ ಲಿಂಕ್ ಇಲ್ಲ ಎಂದು ಹೇಳಿದರು.

ಜಾತಿಗಣತಿ ಅನುಷ್ಠಾನಕ್ಕೆ ಒತ್ತಾಯಿಸಿ ಅಧಿವೇಶನದಲ್ಲಿ ಹೋರಾಟ ಮಾಡುವೆ :

ನೂತನ ಅಜೆಂಡಾಗಳೊಂದಿಗೆ ಜಾತಿಗಣತಿ ಹೋರಾಟದ ವಿಚಾರ ಮಾತನಾಡಿ, ಜಾತಿಗಣತಿ ಅನುಷ್ಠಾನಕ್ಕೆ ಒತ್ತಾಯಿಸಿ ಅಧಿವೇಶನದಲ್ಲಿ ಹೋರಾಟ ಮಾಡುವೆ. ಈ ಬಗ್ಗೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇನೆ. 2ಎ ಪ್ರವರ್ಗದ ಅಡಿ ಪ್ರಬಲ ಜಾತಿಗಳ ಸೇರಿಸುವ ಅಜೆಂಡಾ ತರಬೇಕು. 2ಎ ಪ್ರವರ್ಗದ ಅಡಿ ಪ್ರಬಲ ಜಾತಿಗಳ ಸೇರಿಸುವ ಬಗ್ಗೆ ತೀರ್ಮಾನ ಮಾಡಬೇಕಾದ್ದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ.

ಹೀಗಿರುವಾಗ ಈ ಬಗ್ಗೆ ಬೇರೆ ಯಾರೂ ತೀರ್ಮಾನ ಮಾಡಲು ಸಾಧ್ಯವಿಲ್ಲ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇರುವಾಗ ಸುಭಾಷ್ ಅಡಿ ನೇತೃತ್ವದ ಸಮಿತಿಗೆ ಯಾವುದೇ ಮಹತ್ವ ಇಲ್ಲ. ಯಾವ ಜಾತಿಗಳ ಸೇರಿಸಬೇಕು..? ಯಾವ ಜಾತಿಗಳ ಸೇರಿಸಬಾರದು ಎಂಬ ಬಗ್ಗೆ ತೀರ್ಮಾನ ಮಾಡಬೇಕಾದ್ದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ. ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ನಡೆಸುತ್ತೇವೆ ಎಂದರು.

90 ವರ್ಷಗಳ ಹಿಂದಿನ ಜಾತಿ ಜನಗಣತಿ ಆಧರಿಸಿ ಮೀಸಲಾತಿ ಮತ್ತು ಸರ್ಕಾರಿ ಸವಲತ್ತು ಕೊಡಲಾಗುತ್ತಿದೆ. 1931ರಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಜಾತಿ ಜನಗಣತಿ ನಡೆದಿತ್ತು. ಹೀಗಾಗಿ ಈಗ ಜಾತಿಜನಗಣತಿ ಮಾಡಬೇಕು ಎಂದು ಒತ್ತಾಯ ಮಾಡಿರುವುದು. ನಾವು ಮಾಡಿರುವ ರಿಪೋರ್ಟ್ ಸರಿ ಇದೆ ಸರ್ಕಾರ ಅದನ್ನ ಅಂಗೀಕರಿಸಲಿ ಎಂದು ಸಲಹೆ ನೀಡಿದರು.

ಮೆಟ್ರೋ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಗೆ ಆಕ್ರೋಶ :

ಮೆಟ್ರೋ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಿದ ವಿಚಾರ ಮಾತನಾಡಿ, ಮೆಟ್ರೋದವರು ಹಿಂದೆ ಭಾಷೆ ಬಳಸುವ ಪ್ರಯತ್ನ ಮಾಡ್ತಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡಕ್ಕೆ ಅಗ್ರಸ್ಥಾನ ಇರಬೇಕು. ಅದು ಮೆಟ್ರೋ ಇರಲಿ, ರೈಲ್ವೆ ಇರಲಿ, ಏನೇ ಇರಲಿ‌ ಅಗ್ರಸ್ಥಾನ ಇರಬೇಕು.

ಮೆಟ್ರೋ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಬಳಸಿರುವುದನ್ನು ನಾನು ಖಂಡಿಸುತ್ತೇನೆ. ಎಲ್ಲವೂ ಕೂಡ ಕನ್ನಡದಲ್ಲಿ ನಡೆಯಬೇಕು. ಕೇಂದ್ರ ಮಂತ್ರಿಯೊಬ್ಬರು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತಾಡಿದರೆ ತೊಂದರೆ ಇಲ್ಲ. ಉಳಿದವರುವುದು ಕನ್ನಡದಲ್ಲಿ ನಡೆಯಬೇಕಿತ್ತು. ನಾಮ ಫಲಕಗಳು ಕನ್ನಡದಲ್ಲಿ ಹಾಕಬೇಕಿತ್ತು ಎಂದು ತಿಳಿಸಿದರು.

ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ನೀಡಲಿ :

ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ವಿಚಾರ ಮಾತನಾಡಿ, ಗಣಪತಿ ಹಬ್ಬ ಆಚರಣೆ ಮಾಡಬೇಕು. ಕೊರೊನಾ ನಿಯಮದ ಪ್ರಕಾರ ಆಚರಣೆ ಮಾಡಲಿ. ಇದಕ್ಕೆ ಸರ್ಕಾರ ಅವಕಾಶ ಮಾಡಿ ‌ಕೊಡಲಿ. ಜನಾಶೀರ್ವಾದ ಯಾತ್ರೆಯಲ್ಲಿ ಸಾವಿರಾರು ಜನ ಸೇರಿದ್ದಾರೆ. ಆ ತರಹ ಜನರನ್ನು ಸೇರಿಸಬಾರದು. ಇದು ಬಿಜೆಪಿಗರ ಬೇಜವ್ದಾರಿತನ ತೊರಿಸುತ್ತೆ ಎಂದರು.

ಇದನ್ನೂ ಓದಿ : ನವೆಂಬರ್​ 1ರಿಂದ ಆಡಳಿತ ಸುಧಾರಣಾ ವರದಿಯ ಶಿಫಾರಸು ಜಾರಿಗೆ: ಸಿಎಂ

ABOUT THE AUTHOR

...view details