ಕರ್ನಾಟಕ

karnataka

By

Published : Jul 17, 2021, 4:10 PM IST

ETV Bharat / state

ಮೇಲ್ವರ್ಗದವರಿಗೆ ಆರ್ಥಿಕ, ಸಾಮಾಜಿಕ ಬಲ ತುಂಬಲಿ.. ಆದರೆ, ಮೀಸಲಾತಿ ನೀಡುವುದು ಸರಿಯಲ್ಲ : ಸಿದ್ದರಾಮಯ್ಯ

ವಿಧಾನಸಭೆಯಲ್ಲಿ ಪೌರತ್ವ ಕಾಯ್ದೆಯನ್ನ ಎರಡನೇ ದಿನದಲ್ಲಿ ಅದನ್ನ ಜಾರಿಗೆ ತಂದರು. ಇಂದು ಸಮುದಾಯವನ್ನೇ ಗುರಿಯಾಗಿಟ್ಟುಕೊಂಡು ತಂದರು. ಇದಕ್ಕೆ ಸಾಕಷ್ಟು ವಿರೋಧ ಎದುರಾಯ್ತು. ಇದಕ್ಕೆ ಏನಾದರು ಮಾತನಾಡಿದರೆ ತಿರುಗಿ ಬೀಳ್ತಾರೆ, ಸಿದ್ದರಾಮಯ್ಯ ಹಿಂದೂ ವಿರೋಧಿ ಅಂತಾ ಬಿಂಬಿಸ್ತಾರೆ. ಮನುವಾದಿಗಳು ಸಂವಿಧಾನಕ್ಕೆ ವಿರುದ್ಧವಾದವರು, ಅದಕ್ಕೆ ಸಂವಿಧಾನ ಬದಲಾವಣೆಗೆ ಹೇಳಿದ್ದಾರೆ..

ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು :ಹಿಂದೆ ಮೀಸಲಾತಿ ಬೇಡ ಎಂದಿದ್ದ ಸರ್ಕಾರವೇ ಮೀಸಲಾತಿ ಘೋಷಿಸಿದ್ದರೆ, ಇದನ್ನು ನಿರಂತರವಾಗಿ ವಿರೋಧಿಸುತ್ತ ಬಂದಿರುವರು ಕೂಡ ಸುಮ್ಮನಾಗಿರುವುದು ವಿಪರ್ಯಾಸ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸರ್ಕಾರಿ ನಿವಾಸದಲ್ಲಿ ಪತ್ರಕರ್ತ ಎಂ.ಎಸ್.ಮಣಿ ಲೇಖನಗಳ ಸಂಗ್ರಹ ಕೃತಿ ಮನು ಭಾರತ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಿಂದೆ ಮೀಸಲಾತಿ ವಿರೋಧಿಸುತ್ತಿದ್ದ ಬಿಜೆಪಿ ಸರ್ಕಾರ ಇಂದು ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡಿದೆ. ಹಿಂದೆಲ್ಲ ಮೀಸಲಾತಿ ವಿರೋಧಿಸುತ್ತಿದ್ದ ವರ್ಗದವರು ಸಹ ಇದನ್ನು ವಿರೋಧಿಸುತ್ತಿಲ್ಲ.

ಪತ್ರಕರ್ತ ಎಂ.ಎಸ್.ಮಣಿ ಲೇಖನಗಳ ಸಂಗ್ರಹ ಕೃತಿ ಮನು ಭಾರತ ಪುಸ್ತಕ ಬಿಡುಗಡೆ

ಮೇಲ್ವರ್ಗದವರಿಗೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ನೀಡುವ ಕೆಲಸವನ್ನು ಸರ್ಕಾರ ಮಾಡಲಿ. ಮೇಲ್ವರ್ಗದವರಿಗೆ ಮೀಸಲಾತಿ ನೀಡುವುದು ಸರಿಯಲ್ಲ. ಇವರು ಮೀಸಲಾತಿಗೆ ಅರ್ಹರಲ್ಲ. ಅವರಿಗೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲ ತುಂಬುವ ಕಾರ್ಯವನ್ನು ಬೇಕಾದರೆ ಸರ್ಕಾರ ಮಾಡಲಿ ಎಂದು ಸಲಹೆ ನೀಡಿದರು.

ಇಂದು ಮಂಡಲ ವರದಿ ವಿರೋಧಿಸಿದವರು ಸುಮ್ಮನಾಗಿದ್ದಾರೆ. ಮೀಸಲಾತಿ ಬಗ್ಗೆ ಮಾತನಾಡುವುದು. ನಮಗೂ ಕಷ್ಟವೇ.. ಸಿದ್ದರಾಮಯ್ಯ ದಾರಿ ತಪ್ಪಿಸಿದ ಅಂತಾರೆ, ಬಸವಣ್ಣನವರ ವಿಚಾರಧಾರೆ ಇಂದು ಪ್ರಸ್ತುತವಾಗಿವೆ. ಅಂಬೇಡ್ಕರ್, ಬುದ್ಧ, ಬಸವಣ್ಣ ಇವರೆಲ್ಲಾ ಐತಿಹಾಸಿಕ ಪುರುಷರು ಎಂದು ಬಣ್ಣಿಸಿದರು.

ಎಂ.ಎಸ್.ಮಣಿ ಬರೆದಿರುವ ಆರನೇ ಪುಸ್ತಕ ಇದು. ಪ್ರಸಕ್ತ ಸನ್ನಿವೇಶಗಳನ್ನ ಆಧರಿಸಿ ಬರೆದಿದ್ದಾರೆ. ಟಿವಿ ಬಂದ ಮೇಲೆ ಪುಸ್ತಕ ಓದುವುದೇ ನಿಂತಿದೆ. ಎಲ್ಲರೂ ಇಂದು ಟಿವಿಗಳ ಕಡೆ ತಿರುಗಿದ್ದಾರೆ. ಇಂದು 1500 ಟಿವಿ ಚಾನಲ್ಸ್‌ ದೇಶದಲ್ಲಿವೆ. ನಾನು ನ್ಯೂಸ್ ಬಿಟ್ಟು ಬೇರೆ ನೋಡಲ್ಲ. ಆದರೆ, ಎಲ್ಲಾ ಪತ್ರಿಕೆಗಳನ್ನ ಓದುತ್ತೇನೆ. ಎಲ್ಲಾ ಚಾನಲ್ ಸರಿ ಇಲ್ಲ ಅಂತಾ ಹೇಳಲ್ಲ. ಎಲ್ಲಾ ಪತ್ರಿಕೆಗಳು ಸರಿ ಇವೆ ಅಂತಾನೂ ಹೇಳಲ್ಲ. ಮಾಧ್ಯಮ ವ್ಯಾಪಾರೀಕರಣವಾಗಿದೆ ಎಂದರು.

ವಿಧಾನಸಭೆಯಲ್ಲಿ ಪೌರತ್ವ ಕಾಯ್ದೆಯನ್ನ ಎರಡನೇ ದಿನದಲ್ಲಿ ಅದನ್ನ ಜಾರಿಗೆ ತಂದರು. ಇಂದು ಸಮುದಾಯವನ್ನೇ ಗುರಿಯಾಗಿಟ್ಟುಕೊಂಡು ತಂದರು. ಇದಕ್ಕೆ ಸಾಕಷ್ಟು ವಿರೋಧ ಎದುರಾಯ್ತು. ಇದಕ್ಕೆ ಏನಾದರು ಮಾತನಾಡಿದರೆ ತಿರುಗಿ ಬೀಳ್ತಾರೆ, ಸಿದ್ದರಾಮಯ್ಯ ಹಿಂದೂ ವಿರೋಧಿ ಅಂತಾ ಬಿಂಬಿಸ್ತಾರೆ. ಮನುವಾದಿಗಳು ಸಂವಿಧಾನಕ್ಕೆ ವಿರುದ್ಧವಾದವರು, ಅದಕ್ಕೆ ಸಂವಿಧಾನ ಬದಲಾವಣೆಗೆ ಹೇಳಿದ್ದಾರೆ.

ABOUT THE AUTHOR

...view details