ಕರ್ನಾಟಕ

karnataka

ETV Bharat / state

ನಂದೇ ಬರ್ತ್​ ಸರ್ಟಿಫಿಕೆಟ್​ ಇಲ್ಲ, ಇನ್ನು ನಮ್ಮಪ್ಪಂದು ಎಲ್ಲಿಂದ ತರ್ಲಿ: ಸಿದ್ದರಾಮಯ್ಯ ಪ್ರಶ್ನೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ನನ್ನ ಬರ್ತ್​ ಸರ್ಟಿಫಿಕೆಟ್​ ಇಲ್ಲ ಅಂದ್ಮೇಲೆ ನಮ್ಮಪ್ಪಂದು, ಅಮ್ಮಂದು ಎಲ್ಲಿಂದ ತರಲಿ.? ಇದೆಲ್ಲ ಆಗುವ ಕೆಲಸ ಅಲ್ಲ ಎನ್ನುವ ಮೂಲಕ ಸಿಎಎ, ಎನ್​ಆರ್​ಸಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Opposition leader Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Jan 8, 2020, 5:49 PM IST

Updated : Jan 8, 2020, 6:48 PM IST

ಬೆಂಗಳೂರು:ನನ್ನದೇ ಬರ್ತ್​ ಸರ್ಟಿಫಿಕೆಟ್​ ಇಲ್ಲ ಅಂದ್ಮೇಲೆ ನಮ್ಮಪ್ಪಂದು, ಅಮ್ಮಂದು ಎಲ್ಲಿಂದ ತರಲಿ.? ಇದೆಲ್ಲ ಆಗುವ ಕೆಲಸ ಅಲ್ಲ ಎನ್ನುವ ಮೂಲಕ ಸಿಎಎ, ಎನ್​ಆರ್​ಸಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ದಲಿತ ಸಂಘರ್ಷ ಸಮಿತಿಯು ಗಾಂಧಿ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ನಂತರ ಮಾತನಾಡಿದ ಅವರು, ನನ್ ಬರ್ತ್​ ಸರ್ಟಿಫಿಕೆಟ್​ ಇಲ್ಲ. ಶಾಲೆಯಲ್ಲಿ ಮೇಷ್ಟ್ರು ಹಾಕಿದ ದಿನಾಂಕವೇ ಅಂತಿಮವಾಯಿತು. ಅಂದ್ಮೇಲೆ ನಮ್ಮ ತಂದೆ-ತಾಯಿಯ ಬರ್ತ್​ ಸರ್ಟಿಫಿಕೆಟ್​ ಎಲ್ಲಿಂದ ತರಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರೂರಿಗಳು. ಒಬ್ಬ ಹಿಟ್ಲರ್ ಮಾತ್ರ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರು ಎಲ್ಲಿಂದ ದಾಖಲೆ ತರ್ತಾರೆ..? ಹಿಟ್ಲರ್ ಕೂಡ ತನ್ನ ಕೊನೆಯ ದಿನದಲ್ಲಿ ಕ್ರೂರಿಯಾಗಿದ್ದ ಎಂದು ಮೋದಿಯನ್ನ ಸಿದ್ದರಾಮಯ್ಯ ಹಿಟ್ಲರ್​ಗೆ ಹೋಲಿಕೆ ಮಾಡಿದರು.

ಜನರ ಮಧ್ಯೆ ಕುಳಿತು ಭಾಷಣ ಕೇಳಿದ ಸಿದ್ದರಾಮಯ್ಯ:

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್, ಮಾವಳ್ಳಿ ಶಂಕರ್ ಮೊದಲಾದವರು ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತಿದ್ದರು. ಆದರೆ ಸಿದ್ದರಾಮಯ್ಯ ಮಾತ್ರ ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್, ಆಂಜನೇಯ ಜೊತೆ ಜನರ ಮಧ್ಯೆ ಕುಳಿತು ಭಾಷಣ ಕೇಳಿದರು.

Last Updated : Jan 8, 2020, 6:48 PM IST

ABOUT THE AUTHOR

...view details