ಕರ್ನಾಟಕ

karnataka

ETV Bharat / state

ರಾಜ್ಯ, ಕೇಂದ್ರದಲ್ಲಿ ಅಧಿಕಾರ ನಡೆಸುವ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ - ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯ ರಾಜಕೀಯದಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ರಾಜೀನಾಮೆ ನೀಡುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಈ ಕುರಿತಂತೆ ಸ್ವಪಕ್ಷದ ನಾಯಕರು ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Siddaramaiah
ಸಿದ್ದರಾಮಯ್ಯ

By

Published : Jul 22, 2021, 3:13 PM IST

ಬೆಂಗಳೂರು:ಬಿಜೆಪಿ ಭ್ರಷ್ಟ ಪಕ್ಷ. ಕೇಂದ್ರ, ರಾಜ್ಯದಲ್ಲಿ ಅಧಿಕಾರದಲ್ಲಿರಲು ಅವರಿಗೆ ನೈತಿಕತೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ನಿರ್ಗಮಿಸಿದರೂ ರಾಜ್ಯದಲ್ಲಿ ಇನ್ನೊಂದು ಉತ್ತಮ ಸರ್ಕಾರವನ್ನು ಬಿಜೆಪಿ ನೀಡಲಿದೆ ಎಂಬ ವಿಶ್ವಾಸ ಇಲ್ಲ. ಇದರಿಂದ ಯಾವುದೇ ಸರ್ಕಾರ ಬಂದರೂ ಭ್ರಷ್ಟಾಚಾರ ನಿಯಂತ್ರಣ ಅಸಾಧ್ಯ. ಇಂತಹ ಸರ್ಕಾರ ಇರುವುದಕ್ಕಿಂತ ಹೋಗುವುದೇ ಒಳ್ಳೆಯದು ಎಂದರು.

'ಸಿಎಂ ಯಡಿಯೂರಪ್ಪ ಭ್ರಷ್ಟರು'

ಯಡಿಯೂರಪ್ಪ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದರು. ನಾನು ಆರೇಳು ತಿಂಗಳಿಂದ ಹೇಳ್ತಾನೆ ಇದ್ದೆ. ನನಗೆ ಅವರನ್ನು ಇಳಿಸುವ ಬಗ್ಗೆ ಖಚಿತ ಮಾಹಿತಿ ಇತ್ತು. ಯಡಿಯೂರಪ್ಪ ತೆಗೆಯುವುದರಿಂದ ಲಾಭ ಏನಿಲ್ಲ. ಯಡಿಯೂರಪ್ಪನವರು ಭ್ರಷ್ಟರು ಎಂದು ಆರೋಪಿಸಿದರು.

ದೇಶದಲ್ಲಿ 50 ಲಕ್ಷ ಜನ ಕೋವಿಡ್​ ಎರಡನೇ ಅಲೆಯಲ್ಲಿ ಸತ್ತಿದ್ದಾರೆ. ನಮ್ಮಲ್ಲಿ ಸರ್ಕಾರ ಕೊಟ್ಟಿರುವ ಅಂಕಿಗಿಂತ 10 ಪಟ್ಟು ಹೆಚ್ಚು ಮೃತಪಟ್ಟಿದ್ದಾರೆ. ಇವರ ದುರಾಡಳಿತದಿಂದ ಅಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರಿಗೆ ಯಾವ ಪರಿಹಾರ ಕೊಡಲಿಲ್ಲ. ಇವರು ಅಧಿಕಾರ ಬಿಟ್ಟು ತೊಲಗಲಿ. ಚುನಾವಣೆ ಬಂದರೆ ಎದುರಿಸೋಕೆ ನಾವು ರೆಡಿ ಎಂದರು.

ಸಿಎಂ ರಾಜೀನಾಮೆ ಅವರ ಪಾರ್ಟಿಗೆ ಬಿಟ್ಟ ವಿಚಾರ: ಡಿಕೆಶಿ

ಬಿಎಸ್​​​ವೈ ರಾಜೀನಾಮೆ ಸುಳಿವು ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ನಮಗೂ ಅವರ ಪಾರ್ಟಿಗೂ ಸಂಬಂಧವಿಲ್ಲ. ಅದು ಅವರ ಪಾರ್ಟಿಗೆ ಸೇರಿದ ವಿಚಾರ. ಈ ವಿಚಾರವಾಗಿ ಹೆಚ್ಚು ಹೇಳಲು ಇಷ್ಟ ಪಡುವುದಿಲ್ಲ ಎಂದರು.

ನಾಳೆ ಮಂಗಳೂರು ಸಭೆ ನಡೆಯಬೇಕಿತ್ತು. ಆಸ್ಕರ್ ಫರ್ನಾಂಡಿಸ್ ಅನಾರೋಗ್ಯಗೊಂಡಿದ್ದಾರೆ. ಹಾಗಾಗಿ ನಾಳಿನ ಸಭೆ ರದ್ದಾಗಿದೆ. ತುಮಕೂರು ಸಭೆ ಮುಂದುವರಿಯಲಿದೆ ಎಂದು ಹೇಳಿದರು.

ಇದನ್ನೂಓದಿ: ರಾಜೀನಾಮೆ ಕುರಿತು ಸಿಎಂ ಸುಳಿವು: ಸಚಿವ ಸ್ಥಾನದ ಚಿಂತೆ, ಬಿಎಸ್​​​ವೈ ನಿವಾಸಕ್ಕೆ ಸಚಿವರ ದೌಡು..!

ABOUT THE AUTHOR

...view details